ಜಾಮೀನು ಅರ್ಜಿ ಸಲ್ಲಿಸಿದ ಪತ್ರಕರ್ತ ಸಿದ್ದೀಖ್ ಕಪ್ಪನ್

Prasthutha|

ಲಕ್ನೋ: ಇಡೀ ರಾಷ್ಟ್ರವೇ ಬೆಚ್ಚಿ ಬೀಳುವಂತೆ ಮಾಡಿದ ಹಥ್ರಾಸ್ ಅತ್ಯಾಚಾರದ ಕುರಿತು ವರದಿ ತಯಾರಿಸಲು ತೆರಳಿದ್ದ ವೇಳೆ ಉತ್ತರ ಪ್ರದೇಶ ಪೊಲೀಸರಿಂದ ಬಂಧಿತನಾಗಿರುವ ಪತ್ರಕರ್ತ ಸಿದ್ಧೀಕ್ ಕಪ್ಪನ್ ಜಾಮೀನು ಅರ್ಜಿ ಸಲ್ಲಿಸಿದ್ದು, ಬಿಡುಗಡೆಗಾಗಿ ಅವರು ಮಥುರಾ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ತನ್ನನ್ನು ಯಾವುದೇ ಪುರಾವೆಗಳಿಲ್ಲದೇ ಗಂಭೀರ ಆರೋಪ ಹೊರಿಸಿ, ಸುಳ್ಳು ಪ್ರಕರಣದಲ್ಲಿ ಸಿಲುಕಿಸಿ ಜೈಲಿನಲ್ಲಿರಿಸಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಿದ್ದಾರೆ. 

- Advertisement -

 2020 ರ ಅಕ್ಟೋಬರ್ ತಿಂಗಳಲ್ಲಿ ಹಥ್ರಾಸ್ ದಲಿತ ಹೆಣ್ಣು ಮಗಳ ಅತ್ಯಾಚಾರ ಮತ್ತು ಕೊಲೆಯ ಬಗ್ಗೆ ವರದಿ ತಯಾರಿಸಲು ತೆರಳಿದ್ದ ವೇಳೆಯಲ್ಲಿ ಉತ್ತರ ಪ್ರದೇಶದ ಪೋಲೀಸರು ಸಿದ್ದೀಖ್ ಕಪ್ಪನ್ ಅವರನ್ನು ಬಂಧಿಸಿದ್ದಲ್ಲದೇ ದೇಶದ್ರೋಹ, ಸಮುದಾಯಗಳೆಡೆಯಲ್ಲಿ ವೈರತ್ವ ಮೂಡಿಸಲು ಪ್ರಯತ್ನ, ಭಯೋತ್ಪಾದಕ ಚಟುವಟಿಕೆಗೆ ಹಣ ಸಂಗ್ರಹ ಮುಂತಾದ ಆರೋಪಗಳನ್ನು ಹೊರಿಸಿ, ಜೈಲಿಗೆ ತಳ್ಳಿದ್ದರು.

- Advertisement -