ಪತ್ರಕರ್ತ ಸಿದ್ದೀಕ್ ಕಾಪ್ಪನ್ ಅವರ ತಾಯಿ ನಿಧನರಾಗಿದ್ದಾರೆ. ಜೈಲಿನಲ್ಲಿರುವ ಮಗನ ಬಿಡುಗಡೆಗೆ ಹಂಬಲಿಸುತ್ತಲೇ ತಾಯಿ ಇಹಲೋಕ ತ್ಯಜಿಸಿದ್ದಾರೆ. 90 ವರ್ಷ ಪ್ರಾಯದ ಖದೀಜಾ ಕುಟ್ಟಿ ಶುಕ್ರವಾರ ಮಧ್ಯಾಹ್ನ ನಿಧನರಾಗಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಹತ್ರಾಸ್ ಅತ್ಯಾಚಾರಕ್ಕೊಳಗಾದ ದಲಿತ ಮಹಿಳೆಯ ಕುಟುಂಬವನ್ನು ಭೇಟಿ ಮಾಡಲು ತೆರಳುತ್ತಿದ್ದಾಗ ಉತ್ತರ ಪ್ರದೇಶ ಪೊಲೀಸರು ಪತ್ರಕರ್ತ ಸಿದ್ದೀಕ್ ಕಾಪ್ಪನ್ ಸೇರಿದಂತೆ ಇತರ ಮೂವರನ್ನು ಬಂಧಿಸಿ ಯುಎಪಿಎಯಡಿ ಜೈಲಿಗೆ ಹಾಕಿದ್ದರು.
ಕಳೆದ ವರ್ಷದ ಅಕ್ಟೋಬರ್ 5ರಂದು ಕಾಪ್ಪನ್ ಅವರನ್ನು ಬಂಧಿಸಲಾಗಿದೆ. ಇತ್ತೀಚೆಗೆ ಸುಪ್ರೀಂಕೋರ್ಟ್ ತಾಯಿಯನ್ನು ನೋಡಲು ಕಾಪ್ಪನ್ ಅವರಿಗೆ 5 ದಿನಗಳ ಜಾಮೀನು ನೀಡಿತ್ತು. ಈ ವೇಳೆ
ಸಾಮಾಜಿಕ ಮಾಧ್ಯಮ ಸೇರಿದಂತೆ ಮಾಧ್ಯಮಗಳಿಗೆ ಯಾವುದೇ ಸಂದರ್ಶನವನ್ನು ನೀಡಬಾರದೆಂದು ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ನ್ಯಾಯಪೀಠ ಸೂಚಿಸಿತ್ತು. ಕಾಪ್ಪನ್ ಅವರ ಸಂಬಂಧಿಕರು ಮತ್ತು ಸಂಬಂಧಪಟ್ಟ ವೈದ್ಯರನ್ನು ಹೊರತುಪಡಿಸಿ ಸಾರ್ವಜನಿಕರನ್ನು ಭೇಟಿ ಮಾಡಬಾರದೆಂದು ಪೀಠ ಸೂಚಿಸಿತ್ತು. ಉತ್ತರ ಪ್ರದೇಶ ಪೊಲೀಸ್ ಅಧಿಕಾರಿಗಳ ತಂಡದ ಬೆಂಗಾವಲಿನಲ್ಲಿ ಕಾಪ್ಪನ್ ಅವರನ್ನು ಕೇರಳಕ್ಕೆ ಕರೆತರಲಾಗಿತ್ತು,