ಚಿತ್ರದುರ್ಗ: ರಾಜ್ಯದಲ್ಲಿ ಬಿಜೆಪಿ ಬೆಳೆಸುತ್ತಿರುವ ಹಿಂದುತ್ವ ರಾಜಕಾರಣದ ವಿರುದ್ದ ವಾಗ್ದಾಳಿ ನಡೆಸಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಹಿಂದೂ ಮುಸ್ಲಿಂ ನಡುವೆ ವಿಷ ಹಾಕಿ ರಾಜಕೀಯ ಲಾಭ ಪಡೆಯಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿದರು. ಇಷ್ಟೆಲ್ಲಾ ಮಾಡುವ ನಾವು ಆಪರೇಷನ್ ಮಾಡಿಸಿಕೊಳ್ಳುವ ವೇಳೆ ಹಿಂದೂ ರಕ್ತವೇ ಬೇಕು ಎನ್ನುತ್ತೇವಾ? ಯಾರ ರಕ್ತವಾದರೂ ಆಗಲಿ ಎನ್ನುತ್ತೇವೆ ಅಲ್ವಾ? ಎಂದು ಬಿಜೆಪಿಗೆ ಮಾನವೀಯತೆಯ ಪಾಠ ಮಾಡಿದರು.
ಇಂದು ಚಿತ್ರದುರ್ಗದಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದು, ಬಿಜೆಪಿ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಹಿಜಾಬ್, ಹಲಾಲ್ ಕಟ್, ಮಸೀದಿಗಳ ಧ್ವನಿವರ್ದಕಗಳ ಕುರಿತು ವಿವಾದ ಸೃಷ್ಟಿಸಿದೆ, ಈ ಹಿಜಾಬ್, ಅಝಾನ್ ನಿನ್ನೆ ಮೊನ್ನೆ ಬಂದಿದ್ದಾ? ನಮ್ಮ ಸಮಾಜ ಹುಟ್ಟಿದಾಗಿನಿಂದ ಇವುಗಳಿವೆ, ಹೀಗಾಗಿ ನಾವೆಲ್ಲಾ ಹಿಂದುಗಳಲ್ಲವೇ? ಇವರು ಮಾತ್ರ ಹಿಂದುಗಳಾ? ಎಂದು ಪ್ರಶ್ನಿಸಿದರು.
ನಾನೂ ಹಿಂದೂ ಧರ್ಮಕ್ಕೆ ಸೇರಿದವನು, ಹಿಂದೂ ಅಲ್ಲದಿದ್ದರೆ ನನ್ನ ತಂದೆ ನನಗೆ ಸಿದ್ದರಾಮಯ್ಯ ಎಂದು ಹೆಸರಿಡುತ್ತಿರಲಿಲ್ಲ, ಹಿಂದೂ ಧರ್ಮದ ಬಗ್ಗೆ ನನಗೂ ಗೌರವವಿದೆ, ಜವಾಹರಲಾಲ್ ನೆಹರು, ರಾಜೇಂದ್ರ ಪ್ರಸಾದ್ ಯಾರು, ಇವರೆಲ್ಲರೂ ಹಿಂದೂಗಳೇ ಅಲ್ಲವೇ ಎಂದು ಹೇಳಿದರು.
ದಲಿತ, ಮುಸಲ್ಮಾನ, ಮೇಲ್ಜಾತಿ ಎಂಬುದೇ ಅಮಾನವೀಯ,+ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರನ್ನು ಬಿಜೆಪಿ ಹಾಳು ಮಾಡುತ್ತಿದೆ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.