Home ಟಾಪ್ ಸುದ್ದಿಗಳು ಬಿಗ್ ಬಾಸ್ -13 ವಿನ್ನರ್, ನಟ ಸಿದ್ದಾರ್ಥ ಶುಕ್ಲಾ ನಿಧನ

ಬಿಗ್ ಬಾಸ್ -13 ವಿನ್ನರ್, ನಟ ಸಿದ್ದಾರ್ಥ ಶುಕ್ಲಾ ನಿಧನ

ಮುಂಬೈ: ಬಿಗ್ ಬಾಸ್ -13 ವಿನ್ನರ್, ನಟ ಸಿದ್ದಾರ್ಥ ಶುಕ್ಲಾ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 40 ವರ್ಷ ವಯಸ್ಸಾಗಿತ್ತು.

ಮುಂಬೈಯ ಖಾಸಗಿ ಆಸ್ಪತ್ರೆಯೊಂದರಲ್ಲಿ ನಟ ಸಿದ್ದಾರ್ಥ ಮೃತಪಟ್ಟಿರುವುದನ್ನು ಕುಟುಂಬದ ಮೂಲಗಳು ದೃಢಪಡಿಸಿವೆ.

ಅವರು ಕಳೆದ ರಾತ್ರಿ ಮಲಗುವ ಮುನ್ನ ಕೆಲವು ಔಷಧಿಗಳನ್ನು ತೆಗೆದುಕೊಂಡಿದ್ದರು. ನಂತರ ಅವರಿಗೆ ಹೃದಯಾಘಾತವಾಗಿದೆ. ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ಶೀಘ್ರದಲ್ಲಿ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

 ಅವರು ತಾಯಿ ಮತ್ತು ಇಬ್ಬರು ಸಹೋದರಿಯರು, ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

Join Whatsapp
Exit mobile version