Home ಟಾಪ್ ಸುದ್ದಿಗಳು ಗೂಂಡಾಗಳು ಮಸಿ ಬಳಿದಿರುವುದು ರಾಜ್ಯ ಸರ್ಕಾರದ ಮುಖಕ್ಕೆ: ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿ

ಗೂಂಡಾಗಳು ಮಸಿ ಬಳಿದಿರುವುದು ರಾಜ್ಯ ಸರ್ಕಾರದ ಮುಖಕ್ಕೆ: ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿ

ಬೆಂಗಳೂರು: ರೈತ ನಾಯಕ ರಾಕೇಶ್ ಟಿಕಾಯತ್ ಅವರ ಮೇಲೆ ನಡೆದಿರುವ ಹಲ್ಲೆ ಅತ್ಯಂತ ಖಂಡನೀಯ ದುಷ್ಕೃತ್ಯ. ಕರ್ನಾಟಕದ ಮುಖ್ಯಮಂತ್ರಿ ಅವರೇ ನೆನಪಿರಲಿ, ಗೂಂಡಾಗಳು ಮಸಿ ಬಳಿದಿರುವುದು ರಾಜ್ಯ ಸರ್ಕಾರದ ಮುಖಕ್ಕೆ. ಈ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಿ ಜೈಲಿಗೆ ಅಟ್ಟದಿದ್ದರೆ ಮುಖ್ಯಮಂತ್ರಿಗಳ ಕುರ್ಚಿಯಲ್ಲಿ ಕೂರುವ ನೈತಿಕತೆ ನಿಮಗಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ರೈತ ನಾಯಕ ರಾಕೇಶ್ ಟಿಕಾಯತ್ ಅವರ ಮೇಲಿನ ದೈಹಿಕ ಹಲ್ಲೆ, ಭಿನ್ನಾಭಿಪ್ರಾಯವನ್ನು ಸಿದ್ದಾಂತದ ಮೂಲಕ ಎದುರಿಸಲಾಗದ ಬಿಜೆಪಿ ಮತ್ತು ಬೆಂಬಲಿಗರ ಬೌದ್ಧಿಕ ದಿವಾಳಿತನಕ್ಕೆ ಇದು ಸಾಕ್ಷಿಯಾಗಿದೆ. ಸಹನೆ – ಸಜ್ಜನಿಕೆಗೆ ಹೆಸರಾದ ನಾಡನ್ನು ಗೂಂಡಾ ರಾಜ್ಯವನ್ನಾಗಿ ಮಾಡಿದ ಕುಖ್ಯಾತಿ ರಾಜ್ಯ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Join Whatsapp
Exit mobile version