ಬೆಂಗಳೂರು: ಕಲ್ಯಾಣ ಕರ್ನಾಟಕ ಪ್ರದೇಶದ ಶೈಕ್ಷಣಿಕ ಕ್ಷೇತ್ರವನ್ನು ಸುಧಾರಿಸಲು ‘ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ’ (ಕೆಕೆಆರ್ಡಿಬಿ) ಅಧ್ಯಕ್ಷರಾದ ಡಾ. ಅಜಯ್ ಧರಂ ಸಿಂಗ್ ಅವರು ತಜ್ಞರ ಸಮಿತಿಯನ್ನು ರಚಿಸಿದ್ದಾರೆ.
ಸಮಿತಿ ಅಧ್ಯಕ್ಷರಾಗಿ ಸಂಘಪರಿವಾರ ಹಿನ್ನೆಲೆಯ ಡಾ.ಗುರುರಾಜ ಕರಜಗಿ, ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿ ಹಿರೇಮಗಳೂರು ಕಣ್ಣನ್ ನೇಮಕವಾಗಿರುವುದು ಇದೀಗ ವಿರೋಧಕ್ಕೆ ಕಾರಣವಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ ಎಸ್ ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ, ಕಾಲೇಜುಗಳಲ್ಲಿ ಸಂಘಪರಿವಾರ ಸ್ಕಾರ್ಫ್/ಬುರ್ಕಾ ವಿವಾದ ಎಬ್ಬಿಸಿ ಮುಸ್ಲಿಂ ವಿದ್ಯಾರ್ಥಿನಿಯರ ಶಿಕ್ಷಣ ಕಸಿದಾಗ “ಮುಖ ಮುಚ್ಚಿಕೊಂಡು ಬರಬೇಡ. ತಿಕ ಮುಚ್ಚಿಕೊಂಡು ಬಾ” ಎಂದಿದ್ದ ಸಂಘಿ ಹಿರೇಮಗಳೂರು ಕಣ್ಣನ್ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯ, ಗುರುರಾಜ ಕರ್ಜಗಿ ಎಂಬ ಸಂಘಪರಿವಾರಿದ ವ್ಯಕ್ತಿ ‘ಕಲ್ಯಾಣ ಕರ್ನಾಟಕ ಶೈಕ್ಷಣಿಕ ಗುಣಮಟ್ಟದ ಸುಧಾರಣ ಸಮಿತಿ’ಗೆ ಮುಖ್ಯಸ್ಥ. ಇದೇನಾ ನಿಮ್ಮ ಬದ್ಧತೆ ಸಿದ್ದರಾಮಯ್ಯ ಅವರೇ ಎಂದು ಪ್ರಶ್ನಿಸಿದ್ದಾರೆ.
ಮುಸ್ಲಿಮರ ಹಿತ ಕಾಯುತ್ತೀನಿ ಎಂದು ವಾಗ್ದಾನ ನೀಡಿ ಮುಸ್ಲಿಮರ ಅಷ್ಟೂ ಮತಗಳನ್ನು ಪಡೆದ ನೀವು ಮತ್ತು ಕಾಂಗ್ರೆಸ್ ಪಕ್ಷಕ್ಕೆ ನೀವು ಮಾಡುತ್ತಿರುವುದು ದ್ರೋಹ ಎಂದು ಎಣಿಸುತ್ತಿಲ್ಲವೆ? ನಮ್ಮ ಸಿಟ್ಟು ಬಿಡಿ, ನಿಮ್ಮದೇ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ನಿಮ್ಮ ಈ ಡಬಲ್ ಸ್ಟ್ಯಾಂಡರ್ಡ್ ಬಗ್ಗೆ ಆಕ್ರೋಶ ಹೊರಹಾಕುತ್ತಿದ್ದಾರೆ. ಈಗಲಾದರೂ ತಿಂದಿಕೊಂಡು ಇಂತಹ ತಪ್ಪುಗಳು ಮುಂದೆ ನಡೆಯದಂತೆ ನೋಡಿಕೊಳ್ಳಿ ಸಿದ್ದರಾಮಯ್ಯ ನವರೆ. ಇಲ್ಲವಾದರೆ ನೀವು ನಿಮ್ಮ ಪಕ್ಷ ಇದಕ್ಕೆ ದೊಡ್ಡ ಬೆಲೆ ತೆರಲಿದೆ ಎಂದು ಎಚ್ಚರಿಸಿದ್ದಾರೆ.