Home ಟಾಪ್ ಸುದ್ದಿಗಳು ನಿದ್ದೆ ಮಾಡುವುದಕ್ಕೆ ಸಿದ್ದರಾಮಯ್ಯನವರೇ ಬ್ರ್ಯಾಂಡ್ ಅಂಬಾಸಿಡರ್: ಆರ್ ಅಶೋಕ್

ನಿದ್ದೆ ಮಾಡುವುದಕ್ಕೆ ಸಿದ್ದರಾಮಯ್ಯನವರೇ ಬ್ರ್ಯಾಂಡ್ ಅಂಬಾಸಿಡರ್: ಆರ್ ಅಶೋಕ್

ಬೆಂಗಳೂರು: ಜನ ನಿಮ್ಮನ್ನು ಮುಂದೆ ನಿದ್ರೆಗೆ ಬ್ರ್ಯಾಂಡ್ ಮಾಡುತ್ತಾರೆ ನೋಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಗೆ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ.

ಪ್ರಧಾನಿಯ ಗಾಢ ನಿದ್ರೆ, ಕರ್ನಾಟಕದ ಅಭಿವೃದ್ಧಿಗದೇ ಪ್ರಮುಖ ತೊಂದ್ರೆ ಎಂದು ಬರೆದು ನಿನ್ನೆ ಸಿಎಂ ಸಿದ್ದರಾಮಯ್ಯನವರು ಪ್ರಧಾನಿ ನರೇಂದ್ರ ಮೋದಿ ನಿದ್ದೆ ಮಾಡುವ ರೀತಿಯ ಫೋಟೋ ಟ್ವೀಟ್ ಮಾಡಿದ್ದರು. ಕಾರ್ಯಕ್ರಮಗಳಲ್ಲಿ ಪ್ರಧಾನಿ ನಿದ್ದೆ ಮಾಡ್ತಿರುವ ಒಂದು ದಾಖಲೆ ಕೊಡಿ. ಸಿದ್ದರಾಮಯ್ಯ ಮಲಗಿರೋದಕ್ಕೆ ಸಾಕ್ಷಿ ಇದೆ. ಇತರರು ಬಂದು ಎದ್ದೇಳಣ್ಣೋ ಸಿದ್ರಾಮಣ್ಣ ಅಂತಾ ಎಚ್ಚರಿಸಿದ್ದಾರೆ. ಮೋದಿ ಹಾಗೇ ಮಲಗಿರೋದು ಒಂದು ಫೋಟೋ ತೋರಿಸಿ. ಪ್ರಧಾನಿ ನರೇಂದ್ರ ಮೋದಿ ಹೆಚ್ಚು ಅವಧಿ ಕೆಲಸ ಮಾಡಿದ್ದಾರೆ. ನೀವು 5 ತಾಸು ಕೆಲಸ ಮಾಡಲ್ಲ, ನಿಮ್ಮಿಂದ ಅಭಿವೃದ್ಧಿ ಮಾಡಲಾಗಿಲ್ಲ. ಅಭಿವೃದ್ಧಿ ಮಾಡುವವರನ್ನು ಸಿದ್ದರಾಮಯ್ಯನವರು ಟೀಕೆ ಮಾಡ್ತಾರೆ. ಮಲಗಿರುವ ಒಂದು ಫೋಟೋ ನಿಮ್ಮ ಮನೆಯಲ್ಲಿ ಹಾಕಿಕೊಳ್ಳಿ. ನಿದ್ದೆರಾಮಯ್ಯ ಅಂತಾನೇ ನಿಮಗೆ ಹೆಸರಿದೆ ಎಂದು ಅಶೋಕ್ ಕಿಡಿ ಕಾರಿದ್ದಾರೆ.

Join Whatsapp
Exit mobile version