Home ಟಾಪ್ ಸುದ್ದಿಗಳು ರಾಜ್ಯದ 7 ಕೋಟಿ ಜನರ ಕಿವಿ ಮೇಲೆ ಸಿದ್ದರಾಮಯ್ಯ ಹೂ ಮುಡಿಸಿದ್ದಾರೆ: ಕುಮಾರಸ್ವಾಮಿ ಕಿಡಿ

ರಾಜ್ಯದ 7 ಕೋಟಿ ಜನರ ಕಿವಿ ಮೇಲೆ ಸಿದ್ದರಾಮಯ್ಯ ಹೂ ಮುಡಿಸಿದ್ದಾರೆ: ಕುಮಾರಸ್ವಾಮಿ ಕಿಡಿ

ಬೆಂಗಳೂರು: ಸಿದ್ದರಾಮಯ್ಯ ಮಂಡಿಸಿದ ದಾಖಲೆಯ 15ನೇ ಬಜೆಟ್ ರಾಜ್ಯದ 7 ಕೋಟಿ ಜನರ ಕಿವಿ ಮೇಲೆ ಹೂವು ಮುಡಿಸಿದ ಬಜೆಟ್ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಬಜೆಟ್ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕಳೆದ ಬಿಜೆಪಿ ಅವಧಿಯಲ್ಲಿ ಬೊಮ್ಮಾಯಿ ಬಜೆಟ್ ಮಂಡಿಸುವಾಗಿ ಹೂವು ಕಿವಿಗೆ ಇಟ್ಟುಕೊಂಡು ಸಿದ್ದರಾಮಯ್ಯ ಬಂದಿದ್ದರು. ಅ ಹೂವನ್ನ 7 ಕೋಟಿ ಜನರ ಕಿವಿಗೆ ಈಗ ಮುಡಿಸಿದ್ದಾರೆ.


ಈ ಬಜೆಟ್ ನೋಡಿದರೆ ಇದು ನಾಳೆ ಬಾ ಸರ್ಕಾರ ಎಂದು ಟಾಂಗ್ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಅವರ 15ನೇ ಬಜೆಟ್ ಇದು. ರಾಜ್ಯದ ಇತಿಹಾಸದಲ್ಲಿ 15 ಬಜೆಟ್ ಮಂಡಿಸೋರು ಮುಂದೆ ಬರುತ್ತಾರೋ ಗೊತ್ತಿಲ್ಲ. ಸಿದ್ದರಾಮಯ್ಯಗೆ ಅನುಭವ, ಆಡಳಿತದ ಅನುಭವ ಇದೆ. ಆದರೆ ಅವರು ಬಜೆಟ್ ಓದುವಾಗಲೇ ನನಗೆ ಅನಿಸಿದ್ದು ಅವರಲ್ಲಿ ವಿಶ್ವಾಸದ ಕೊರತೆ ಎದ್ದು ಕಾಣುತ್ತಿದೆ ಅಂತ. ಗ್ಯಾರಂಟಿಯ ಗುಂಗಿನಿಂದ ಈ ಸರ್ಕಾರ ಹೊರಗೆ ಬಂದಿಲ್ಲ. 10 ತಿಂಗಳು ಕಳೆದರೂ ಗ್ಯಾರಂಟಿ ಬಗ್ಗೆ ಕನವರಿಗೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

Join Whatsapp
Exit mobile version