Home ಟಾಪ್ ಸುದ್ದಿಗಳು ಚಿಂತಕ ಜಿ.ರಾಜಶೇಖರ್ ನಿಧನಕ್ಕೆ ಸಿದ್ದರಾಮಯ್ಯ, ಡಿಕೆಶಿ ಸೇರಿ ಗಣ್ಯರ ಸಂತಾಪ

ಚಿಂತಕ ಜಿ.ರಾಜಶೇಖರ್ ನಿಧನಕ್ಕೆ ಸಿದ್ದರಾಮಯ್ಯ, ಡಿಕೆಶಿ ಸೇರಿ ಗಣ್ಯರ ಸಂತಾಪ

ಬೆಂಗಳೂರು: ಪ್ರಖರ ಚಿಂತಕ, ಮಾನವ ಹಕ್ಕುಗಳ ಹೋರಾಟಗಾರ, ಬಹುಮುಖ ವ್ಯಕ್ತಿತ್ವದ ಹೋರಾಟಗಾರಾಗಿದ್ದ ಜಿ.ರಾಜಶೇಖರ್ ಅವರ ನಿಧನಕ್ಕೆ ನಾಡಿನ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿ, ಕನ್ನಡದ ಹಿರಿಯ ವಿಮರ್ಶಕ, ನೇರ-ನಿಷ್ಠುರ ನಡವಳಿಕೆಯ ಪ್ರಖರ ಚಿಂತಕ ಮತ್ತು ಸೌಹಾರ್ದ ಬದುಕಿನ ಹೋರಾಟಗಾರ ಜಿ.ರಾಜಶೇಖರ್ ಅಗಲಿಕೆ ನಮ್ಮೆಲ್ಲರ ಪಾಲಿಗೆ ತುಂಬಿಕೊಳ್ಳಲಾಗದ ನಷ್ಟ. ಅವರ ಕುಟುಂಬ ಮತ್ತು ಸ್ನೇಹಿತರ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಸಂತಾಪ ಸೂಚಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಂತಾಪ ಸೂಚಿಸಿದ್ದು, ಸಹಬಾಳ್ವೆಯ ಸಮಾಜ ನಿರ್ಮಾಣಕ್ಕೆ ದುಡಿದ ಪ್ರಖರ ಚಿಂತಕ, ವಿಮರ್ಶಕ, ಲೇಖಕ ಜಿ.ರಾಜಶೇಖರ್ ಅವರು ನಿಧನರಾದ ವಿಷಯ ತಿಳಿದು ಮನಸ್ಸಿಗೆ ನೋವಾಯಿತು. ಅವರ ಕುಟುಂಬ ವರ್ಗ ಹಾಗೂ ಅಭಿಮಾನಿಗಳಿಗೆ ಸಂತಾಪಗಳನ್ನು ಸಲ್ಲಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

Join Whatsapp
Exit mobile version