Home ಕರಾವಳಿ ಬೆಳ್ತಂಗಡಿ: ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಕಿ ಮೃತ್ಯು

ಬೆಳ್ತಂಗಡಿ: ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಕಿ ಮೃತ್ಯು

ಬೆಳ್ತಂಗಡಿ : ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಬೆಂಗಳೂರಿನ ಆಸ್ಟರ್ ಸಿಎಂಐ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಪಡಂಗಡಿ ಗ್ರಾಮದ ಬದ್ಯಾರ್ ನಿವಾಸಿ ವಿಲಿಯಂ ಹಾಗೂ ಅನಿತಾ ಡಿಸಿಲ್ವ ಅವರ ಮಗಳು ಏಂಜಲ್ ಅನುಷಾ ಡಿಸಿಲ್ವ ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಬಾಲಕಿ ಏಂಜಲ್ ಅನುಷಾ ಡಿಸಿಲ್ವ ಬೆಳ್ತಂಗಡಿ ಚರ್ಚ್ ಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು, ಪಠ್ಯ ಹಾಗೂ ಪಠ್ಯತೇರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದಳು.

ಅರಸಿನ ಕಾಮಾಲೆ ಕಾಯಿಲೆಯಿಂದ ಬಾಲಕಿಯ ಲಿವರ್ ಜರ್ಝರಿತಗೊಂಡಿದ್ದು, ಲಿವರ್ ಕಸಿ ಮಾಡಲು ಸೋಮವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಜೀವನ್ಮರಣ ಹೋರಾಟದ ಬಳಿಕ ಇಂದು ಕೊನೆಯುಸಿರೆಳೆದಿದ್ದಾರೆ.

Join Whatsapp
Exit mobile version