ಜು.4ರಂದು ಆಗಸದಿಂದಲೇ ವಿದ್ಯಾರ್ಥಿಗಳೊಂದಿಗೆ ಶುಭಾಂಶು ಶುಕ್ಲಾ ಸಂವಾದ

- Advertisement -

ಬೆಂಗಳೂರು: ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿರುವ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಶುಕ್ರವಾರ ಶಾಲಾ ವಿದ್ಯಾರ್ಥಿಗಳು ಹಾಗೂ ಇಸ್ರೋ ವಿಜ್ಞಾನಿಗಳೊಂದಿಗೆ ಹವ್ಯಾಸಿ ರೇಡಿಯೋ (ಹ್ಯಾಮ್‌ ರೇಡಿಯೋ) ಮುಖಾಂತರ ಶುಕ್ರವಾರ ಸಂವಾದ ನಡೆಸಲಿದ್ದಾರೆ.

- Advertisement -

ಬೆಂಗಳೂರಿನ ಯು.ಆರ್‌.ರಾವ್‌ ಉಪಗ್ರಹ ಕೇಂದ್ರದಲ್ಲಿ ಸ್ಥಾಪಿಸಲಾಗಿರುವ ಟೆಲಿಬ್ರಿಡ್ಜ್ ಮುಖಾಂತರ ಈ ಸಂವಾದ ನಡೆಸಲು ಯೋಜಿಸಿರುವುದಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿನ ಹವ್ಯಾಸಿ ರೇಡಿಯೋ ಸಂಸ್ಥೆ (ಎಆರ್‌ಐಎಸ್‌ಎಸ್‌) ತಿಳಿಸಿದೆ.

ಭಾರತೀಯ ಕಾಲಮಾನ ಮಧ್ಯಾಹ್ನ 3:47ಕ್ಕೆ ಈ ಸಂವಾದ ಪ್ರಾರಂಭವಾಗಲಿದ್ದು, ವಿದ್ಯಾರ್ಥಿಗಳು ಹಾಗೂ ವಿಜ್ಞಾನಿಗಳೊಂದಿಗೆ ಶುಕ್ಲಾ ಅವರು 11-12 ನಿಮಿಷಗಳ ಕಾಲ ನೇರ ಸಂವಾದ ನಡೆಸಲಿದ್ದಾರೆ.

- Advertisement -

ಶುಭಾಂಶು ಅವರು ಪ್ರಶ್ನೆಗಳಿಗೆ ಉತ್ತರಿಸಲು ತೆಗೆದುಕೊಳ್ಳುವ ಸಮಯವನ್ನು ಅವಲಂಬಿಸಿ 15-16 ಪ್ರಶಅನೆಗಳನ್ನು ಕೇಳುವ ನಿರೀಕ್ಷೆಗಳಿವೆ. ಈ ಸಂವಾದ ಸಾರ್ವಜನಿಕವಲ್ಲ, ಆಯ್ದ ವಿದ್ಯಾರ್ಥಿಗಳು ಸಂವಾದದಲ್ಲಿ ಭಾಗಿಯಾಗಲಿದ್ದು, ಪ್ರಶ್ನೆಗಳನ್ನು ಸಿದ್ಧಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -


Must Read

Related Articles