Home ಟಾಪ್ ಸುದ್ದಿಗಳು PSI ನೇಮಕಾತಿ ಅಕ್ರಮ: ತನಿಖೆಗಾಗಿ ನಿಮಗೂ ನೋಟಿಸ್ ನೀಡಬೇಕಲ್ಲವೇ: ಆರಗ ಜ್ಞಾನೇಂದ್ರಗೆ ಕಾಂಗ್ರೆಸ್ ಪ್ರಶ್ನೆ

PSI ನೇಮಕಾತಿ ಅಕ್ರಮ: ತನಿಖೆಗಾಗಿ ನಿಮಗೂ ನೋಟಿಸ್ ನೀಡಬೇಕಲ್ಲವೇ: ಆರಗ ಜ್ಞಾನೇಂದ್ರಗೆ ಕಾಂಗ್ರೆಸ್ ಪ್ರಶ್ನೆ

ಬೆಂಗಳೂರು: ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗಾಗಿ ನಿಮಗೂ ನೋಟಿಸ್ ನೀಡಬೇಕಲ್ಲವೇ ಎಂದು ಕಾಂಗ್ರೆಸ್ ಅರಗ ಜ್ಞಾನೇಂದ್ರ ಅವರನ್ನು ಪ್ರಶ್ನಿಸಿದೆ.


ಕಾಂಗ್ರೆಸ್ –ಬಿಜೆಪಿ ನಾಯಕರ ಮಧ್ಯೆ ಪರಸ್ಪರ ವಾಗ್ದಾಳಿ, ಕೆಸರೆರಚಾಟ ಜೋರಾಗಿದೆ.


ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಪಿಎಸ್ ಐ ನೇಮಕಾತಿಯಲ್ಲಿ ಅಕ್ರಮವೇ ಆಗಿಲ್ಲವೆಂದು ಇಷ್ಟು ಆತ್ಮವಿಶ್ವಾಸದಿಂದ ಸದನದಲ್ಲಿ ಸಮರ್ಥಿಸಿದ ಆರಗ ಜ್ಞಾನೇಂದ್ರ ಅವರೇ, ಈ ಸಮರ್ಥನೆಗೂ, ದಿವ್ಯಾ ಹಾಗರಗಿ ಬಂಧನ ಆಗದಿರುವುದಕ್ಕೂ, ನೀವು ಅವರ ಆದರಾತಿಥ್ಯ ಸ್ವೀಕರಿಸಿದ್ದಕ್ಕೂ ಗಾಢಸಂಬಂಧ ಇದೆಯಲ್ಲವೇ ಎಂದು ಪ್ರಶ್ನಿಸಿದೆ.


‘ಪ್ರಕರಣಕ್ಕೆ ಸಂಬಂಧಿಸಿ ನಿಮ್ಮ ಸಮರ್ಥನೆಯನ್ನು ಬಾಲಿಶತನ ಎನ್ನೋಣವೇ?, ಸಿಐಡಿ ತನಿಖೆಗಾಗಿ ನಿಮಗೂ ನೋಟಿಸ್ ನೀಡಬೇಕಲ್ಲವೇ’ ಎಂದು ಕಾಂಗ್ರೆಸ್ ಬರೆದುಕೊಂಡಿದೆ.

Join Whatsapp
Exit mobile version