ಬ್ರೆಸಿಲಿಯಾ: ಬ್ರೆಜಿಲ್ನಲ್ಲಿ ಎರಡು ಶಾಲೆಗಳಿಗೆ ನುಗ್ಗಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ ನಡೆದಿದ್ದು, ಕೃತ್ಯದಲ್ಲಿ ಇಬ್ಬರು ಶಿಕ್ಷಕರು, ಓರ್ವ ವಿದ್ಯಾರ್ಥಿ ಪ್ರಾಣ ಕಳೆದುಕೊಂಡಿದ್ದಾರೆ. 11 ಮಂದಿ ಗಾಯಗೊಂಡಿದ್ದಾರೆ.
ಬ್ರೆಜಿಲ್ನ ಆಗ್ನೇಯ ಭಾಗದ ಎಸ್ಪಿರಿಟೊ ಸ್ಯಾಂಟೊ ರಾಜ್ಯದ ಅರಕ್ರುಜ್ನ ಸಣ್ಣ ಪಟ್ಟಣದಲ್ಲಿ ಘಟನೆ ಸಂಭವಿಸಿದೆ. ಒಂದೇ ಬೀದಿಯಲ್ಲಿದ್ದ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಮೇಲೆ ಸೆಮಿ ಅಟೋಮ್ಯಾಟಿಕ್ ಪಿಸ್ತೂಲ್ನೊಂದಿಗೆ ನುಗ್ಗಿದ ಬುಲೆಟ್ ಪ್ರೂಫ್ ಧರಿಸಿದ್ದ ದಾಳಿಕೋರನೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ.
ಕೃತ್ಯವು ಸಿಸಿಟಿವಿಯಲ್ಲಿ ದಾಖಲಾಗಿದ್ದು, ದುಷ್ಕರ್ಮಿಯು ಮುಖವಾಡ ಧರಿಸಿದ್ದರಿಂದ ಗುರುತು ಸಿಕ್ಕಿಲ್ಲ. ಕೃತ್ಯಕ್ಕೆ ಸಂಬಂಧಿಸಿ ತನಿಖೆ ನಡೆಸಲಾಗುತ್ತಿದೆ.