►ಮಸೀದಿಯೊಳಗೆ ಶಿವಲಿಂಗವಿದೆ ಎಂದ ವಕೀಲರ ಹೇಳಿಕೆ ಅಲ್ಲಗಳೆದ ಮ್ಯಾಜಿಸ್ಟ್ರೇಟ್
ವಾರಣಾಸಿ: ಉತ್ತರ ಪ್ರದೇಶದ ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದ ಮೂರು ದಿನಗಳ ವೀಡಿಯೊಗ್ರಫಿ ಸಮೀಕ್ಷೆಯು ನ್ಯಾಯಾಲಯದ ವಿಚಾರಣೆಗೆ ಒಂದು ದಿನ ಮುಂಚಿತವಾಗಿಯೇ ಕೊನೆಗೊಂಡಿದೆ.
ಚಿತ್ರೀಕರಣದ ಕೊನೆಯ ದಿನವಾದ ಇಂದು ಬೆಳಗ್ಗೆ ಸಂಕೀರ್ಣದ ಬಳಿ ಬಿಗಿ ಭದ್ರತೆ ಮತ್ತು ನಿರ್ಬಂಧಗಳ ನಡುವೆ ಪ್ರಾರಂಭವಾಗಿದೆ. ಸಮೀಕ್ಷಾ ಆಯೋಗವು ಇಂದು ತನ್ನ ಕೆಲಸವನ್ನು ಪೂರ್ಣಗೊಳಿಸಿದ್ದು ಇದು ಎಲ್ಲಾ ಸ್ಥಳಗಳನ್ನು ವಿವರವಾಗಿ ಚಿತ್ರೀಕರಿಸಿ ಮೂರು ಗುಮ್ಮಟಗಳು, ಭೂಗತ ನೆಲಮಾಳಿಗೆಗಳು, ಕೊಳ ಹೀಗೆ ಎಲ್ಲವನ್ನೂ ವೀಡಿಯೊ ರೆಕಾರ್ಡ್ ಮಾಡಿದೆ.
ಹಿಂದೂ ಮಹಿಳೆಯರನ್ನು ಪ್ರತಿನಿಧಿಸುವ ವಕೀಲರು ಮಸೀದಿ ಸಂಕೀರ್ಣದೊಳಗಿನ ಕೊಳದಲ್ಲಿ ಶಿವಲಿಂಗ ಕಂಡುಬಂದಿದೆ ಎಂದು ಹೇಳಿದ್ದರೂ ಜ್ಞಾನವಾಪಿ ಮಸೀದಿಯ ಸಮೀಕ್ಷೆಯ ಯಾವುದೇ ವಿವರಗಳನ್ನು ಆಯೋಗದ ಯಾವುದೇ ಸದಸ್ಯರು ಬಹಿರಂಗಪಡಿಸಿಲ್ಲ ಎಂದು ವಾರಣಾಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಳಿದ್ದಾರೆ.
ಈ ಸಮೀಕ್ಷೆಯ ಮೊದಲನೇ ಭಾಗವು ಮೇ 09 ರಂದು ನಡೆಯಿತಾದರೂ ಮಸೀದಿಯ ಒಳಗೆ ಚಿತ್ರೀಕರಿಸುವ ಬಗ್ಗೆ ವಿವಾದ ಭುಗಿಲೆದ್ದ ನಂತರ ಅದನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಆ ನಂತರ ನ್ಯಾಯಾಲಯ ನೀಡಿದ ಆದೇಶದ ಹಿನ್ನೆಲೆಯಲ್ಲಿ ಮಸೀದಿ ಒಳಗಡೆಯೂ ಚಿತ್ರೀಕರಣ ಮಾಡಿದ್ದು ಗಡುವಿನ ಮುಂಚೆಯೇ ಅದು ಮುಕ್ತಾಯಗೊಂಡಿದೆ