Home ಟಾಪ್ ಸುದ್ದಿಗಳು ರಾಜಕೀಯ ಭಿನ್ನಮತ ದೂರವಿಟ್ಟು ಮೋದಿಗೆ ಬೆಂಬಲ ನೀಡಿ, ಜೆಡಿಎಸ್ ನಿಂದಲೂ ನಾವು ಅಪೇಕ್ಷೆ ಮಾಡುತ್ತೇವೆ: ಶೋಭಾ...

ರಾಜಕೀಯ ಭಿನ್ನಮತ ದೂರವಿಟ್ಟು ಮೋದಿಗೆ ಬೆಂಬಲ ನೀಡಿ, ಜೆಡಿಎಸ್ ನಿಂದಲೂ ನಾವು ಅಪೇಕ್ಷೆ ಮಾಡುತ್ತೇವೆ: ಶೋಭಾ ಕರಂದ್ಲಾಜೆ

ಚಿಕ್ಕಮಗಳೂರು: ರಾಜಕೀಯ ಭಿನ್ನಮತಗಳನ್ನ ದೂರವಿಟ್ಟು ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಬಲ ಕೊಡಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.


ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಜೆಡಿಎಸ್ ಬೆಂಬಲ ಸೂಚಿಸುವ ಬಗ್ಗೆ ಜಿಲ್ಲೆಯಲ್ಲಿ ಮಾತನಾಡಿದ ಅವರು, ಅನೇಕ ಪಕ್ಷಗಳು ಬೆಂಬಲಿಸುತ್ತಿದ್ದು, ಜೆಡಿಎಸ್ ನಿಂದಲೂ ನಾವು ಅಪೇಕ್ಷೆ ಮಾಡುತ್ತೇವೆ ಎಂದರು.


ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿಯಾಗಬೇಕು. ಇಂದು ಭಾರತಕ್ಕೆ ಎದ್ದುನಿಂತ್ತು ಗೌರವ ನೀಡುತ್ತಿದ್ದಾರೆ ಎದರೆ ಅದಕ್ಕೆ ಪ್ರಧಾನಿ ಮೋದಿ ಅವರೇ ಕಾರಣ. ಹೀಗಾಗಿ ರಾಜಕೀಯ ಭಿನ್ನಮತಗಳನ್ನ ದೂರ ಬಿಟ್ಟು ಬೆಂಬಲ ಕೊಡಬೇಕು. ಇಂತಹ ಅಪೇಕ್ಷೆ ಅನೇಕ ರಾಜಕೀಯ ಪಾರ್ಟಿಯಲ್ಲೂ ಇದೆ. ಈ ಅಪೇಕ್ಷೆಯನ್ನ ಜೆಡಿಎಸ್ನಿಂದಲೂ ನಿರೀಕ್ಷೆ ಮಾಡುತ್ತೇವೆ ಎಂದರು.

Join Whatsapp
Exit mobile version