ಖೇಲ್ ರತ್ನ ಹೆಸರು ಬದಲಾವಣೆ ಜನರ ಅಭಿಮತವಲ್ಲ, ಒಂದು ರಾಜಕೀಯ ದಾಳ : ಶಿವಸೇನೆ

Prasthutha|

ಮುಂಬೈ: ಒಕ್ಕೂಟ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಶಿವಸೇನೆಯು, ಬಿಜೆಪಿಯ ರಾಜಕೀಯ ಆಟಗಾರರು ಈಗ ಕೇಳುತ್ತಿದ್ದಾರೆ ರಾಜೀವ್ ಗಾಂಧಿ ಎಂದಾದರೂ ಹಾಕಿ ಸ್ಟಿಕ್ ಹಿಡಿದಿದ್ದಾರೆಯೇ? ಆದರೆ ಅಹಮದಾಬಾದಿನ ಸರ್ದಾರ್ ಪಟೇಲ್ ಸ್ಟೇಡಿಯಂ ಹೆಸರನ್ನು ನರೇಂದ್ರ ಮೋದಿ ಸ್ಟೇಡಿಯಂ ಎಂದು ಬದಲಾಯಿಸಲಾಯಿತು. ಮೋದಿ ಯಾವತ್ತಾದರೂ ಬ್ಯಾಟ್ ಹಿಡಿದಿದ್ದಾರೆಯೇ ಎಂದು ಶಿವಸೇನೆಯ ಸ್ವಪ್ನಿಲ್ ರಾವಲ್ ಪ್ರಶ್ನಿಸಿದ್ದಾರೆ.

- Advertisement -

ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯ ಹೆಸರನ್ನು ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಹೆಸರು ಬದಲಾಯಿಸಿದ ಕೇಂದ್ರ ಸರಕಾರದ ನಿರ್ಣಯವನ್ನು ಶಿವಸೇನೆ ಖಂಡಿಸಿದೆ. ಶಿವಸೇನೆಯ ಪತ್ರಿಕೆ ಸಾಮ್ನಾದ ಸಂಪಾದಕೀಯದಲ್ಲಿ “ಭಾರತದ ಹಾಕಿ ದಂತ ಕತೆ ಧ್ಯಾನ್ ಚಂದ್ ರನ್ನು ಗೌರವಿಸುವುದು ಸರಿ, ಹಾಗೆಂದು ಮಾಜೀ ಪ್ರಧಾನಿಯವರ ಬಲಿದಾನವನ್ನು ಅವಮಾನಿಸಬೇಕಾದ ಅಗತ್ಯವಿಲ್ಲ” ಎಂದು ಬರೆದಿದ್ದಾರೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರೇ ಸಾಮ್ನಾದ ಸಂಪಾದಕರು.

ಆಗಸ್ಟ್ 6ರಂದು ಪ್ರಧಾನಿ ಮೋದಿಯವರು ಸಾರ್ವಜನಿಕರ ಒತ್ತಾಯದ ಮೇರೆಗೆ ದೇಶದ ದೊಡ್ಡ ಕ್ರೀಡಾ ಪ್ರಶಸ್ತಿಯಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯ ಹೆಸರನ್ನು ಹಾಕಿ ಮಾಂತ್ರಿಕ ಧ್ಯಾನ್ ಚಂದ್ ರನ್ನು ಗೌರವಿಸಲು ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಬದಲಿಸುವುದಾಗಿ ಹೇಳಿ ಟ್ವೀಟ್ ಮಾಡಿದ್ದರು.

- Advertisement -

ಪಾರ್ಲಿಮೆಂಟಿನಲ್ಲಿ ವಿರೋಧ ಪಕ್ಷಗಳ ಸ್ವರವಾಗಿ ಡೆರಿಕ್ ಓಬ್ರೇನ್ ಹೇಳಿದ್ದಿಷ್ಟು.
“ಉಗ್ರಗಾಮಿಗಳಿಂದ ಇಂದಿರಾ ಗಾಂಧಿಯವರ ಹತ್ಯೆಯಾಯಿತು. ರಾಜೀವ್ ಗಾಂಧಿಯವರು ಕೂಡ ಉಗ್ರ ದಾಳಿಯಲ್ಲಿ ತಮ್ಮ ಪ್ರಾಣ ಕಳೆದುಕೊಂಡರು. ಇಬ್ಬರ ನಡುವೆ ರಾಜಕೀಯ ಭಿನ್ನಾಭಿಪ್ರಾಯ ಇರಬಹುದು. ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯಗಳಿಗೆ ಅವಕಾಶವಿದೆ. ದೇಶದ ಅಭಿವೃದ್ಧಿಗಾಗಿ ತಮ್ಮನ್ನು ಅರ್ಪಿಸಿಕೊಂಡ ಪ್ರಧಾನಿಗಳ ವಿಷಯವು ಅಪಹಾಸ್ಯಕ್ಕೆ ಗುರಿಯಾಗಬಾರದು.” ಇದನ್ನು ಸಾಮ್ನಾ ಎತ್ತಿ ಬರೆದಿದೆ.



Join Whatsapp