ಕೋವಿಡ್ ಭೀತಿಗೆ ಸಂಸತ್ತ್ ಅಧಿವೇಶನಗಳಿಗೆ ಕತ್ತರಿ | ಬಿಹಾರ ಚುನಾವಣೆ ನಿರಾತಂಕ | ಪ್ರಶ್ನಿಸಿದ ಶಿವಸೇನೆ

Prasthutha|

ಮುಂಬೈ, ಸೆ.25: ಕೊರೋನ ವೈರಸ್‌ನಿಂದ ಜನರು ಭಯಭೀತರಾಗಿರುವಾಗ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಬಿಹಾರದಲ್ಲಿ ಚುನಾವಣಾ ಪ್ರಚಾರಕ್ಕೆ ಸುಶಾಂತ್ ಸಿಂಗ್ ಪ್ರಕರಣವನ್ನು ಬಳಸಿಕೊಳ್ಳಲಾಗುತ್ತಿದೆ ಎಂಬುದಾಗಿ ಶಿವಸೇನೆ ಆರೋಪಿಸಿದೆ. ಶಿವಸೇನೆ ಮುಖಂಡ ಸಂಜಯ್ ರೌತ್ ಅವರು, “ಎಲ್ಲಾ ಮುನ್ನೆಚ್ಚರಿಕೆಗಳ ನಡುವೆಯೂ ಸಂಸತ್ತಿನ ಅಧಿವೇಶನವನ್ನು ಮೊಟಕುಗೊಳಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಚುನಾವಣೆಗಳು ಹೇಗೆ ನಡೆಯುತ್ತವೆ? ಚುನಾವಣೆಗಳು ನಡೆಯಬೇಕೆಂಬುದನ್ನು ಅಲ್ಲಗಳೆಯುವಂತಿಲ್ಲ. ಆದರೆ, ಜನರ ಜೀವಕ್ಕೆ ಹಾನಿಯಾಗಬಹುದೆಂಬ ಅರಿವಿದ್ದರೂ ಈ ಆತುರವೇಕೆ?” ಎಂಬುದಾಗಿ ಅವರು ಪ್ರಶ್ನಿಸಿದರು.

- Advertisement -

“ಜನರು ಭಯಭೀತರಾಗಿದ್ದಾರೆ ಮತ್ತು ಇದು ಮತದಾನದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಸುಶಾಂತ್ ಸಿಂಗ್ ಪ್ರಕರಣವನ್ನು ಏಕೆ ಸ್ಪೋಟಿಸಲಾಯ್ತು ಎಂಬುದು ಈಗ ಸ್ಪಷ್ಟವಾಗಿದೆ” ಎಂದು ಅವರು ಹೇಳಿದರು.

ಬಿಹಾರದ ಮಾಜಿ ಡಿಜಿಪಿ ಗುಪ್ತೇಶ್ವರ ಪಾಂಡೆ ಅವರನ್ನು ಜಾಲಾಡಿದ ಸಂಜಯ್ ರಾವುತ್, “ಡಿಜಿಪಿ ಜಿಗಿಯುತ್ತಿದ್ದರು … ಈಗ ಅವರು ರಾಜೀನಾಮೆ ನೀಡಿದ್ದಾರೆ ಮತ್ತು ತಾನು ಈಗ ಚುನಾವಣೆಗೆ ಸ್ಪರ್ಧಿಸಬಹುದು ಎಂಬುದಾಗಿ ಹಾಡುತ್ತಿದ್ದಾರೆ… ಮುಂಬೈ ಕುರಿತು ಅಪಪ್ರಚಾರ ನಡೆಸಿ ಬಿಹಾರ ಚುನಾವಣೆಗೆ ಫಲಪ್ರದವಾಗಿ ಬಳಸಿಕೊಳ್ಳುತ್ತಿರುವ ಯೋಜನೆಗಳು ಈಗ ಸ್ಪಷ್ಟವಾಗಿ ಗೋಚರಿಸುತ್ತಿವೆ” ಎಂದು ಅವರು ಹೇಳಿದರು.

- Advertisement -

“ಸುಶಾಂತ್ ಸಿಂಗ್ ಸಾವಿನ ತನಿಖೆಗಾಗಿ ಎನ್‌ಸಿಬಿ ಮತ್ತು ಸಿಬಿಐ ಬಂದಿದ್ದವು? ಅವುಗಳಿಗೆ ಈಗ ಏನಾಯಿತು? ಸಿಬಿಐ, ಎನ್‌ಸಿಬಿ ಬಗ್ಗೆ ಯಾಕೆ ಯಾರೂ ಮಾತನಾಡುತ್ತಿಲ್ಲ” ಎಂದು ಸಂಜಯ್ ರಾವುತ್ ಹೇಳಿದ್ದಾರೆ.

ಬಿಹಾರದಲ್ಲಿ ವಿಧಾನಸಭಾ ಚುನಾವಣೆಯು ಅಕ್ಟೋಬರ್ 28, ನವೆಂಬರ್ 3 ಮತ್ತು ನವೆಂಬರ್ 7 ರಂದು ಮೂರು ಹಂತಗಳಲ್ಲಿ ನಡೆಯಲಿದ್ದು, ನಂತರ ನವೆಂಬರ್ 10 ರಂದು ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗ ಶುಕ್ರವಾರ ಪ್ರಕಟಿಸಿದೆ.

ಕೋವಿಡ್ -19 ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಜಾಗತಿಕ ಮಟ್ಟದಲ್ಲಿಯೇ ನಡೆಯುವ ಅತಿದೊಡ್ಡ ಚುನಾವಣೆ ಮತದಾನ ಪ್ರಕ್ರಿಯೆ ಇದಾಗಿದೆ.

Join Whatsapp