ಅನಾರೋಗ್ಯದ ಕಾರಣ ಮತದಾನ ಮಾಡಲು ಆಗಲಿಲ್ಲ: ಶಿವರಾಮ್ ಹೆಬ್ಬಾರ್ ಸ್ಪಷ್ಟನೆ

Prasthutha|

ಕಾರವಾರ: ಅನಾರೋಗ್ಯದ ಕಾರಣ ರಾಜ್ಯಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಆಗಲಿಲ್ಲ ಎಂದು ಯಲ್ಲಾಪುರದಲ್ಲಿ ಶಾಸಕ ಶಿವರಾಮ್ ಹೆಬ್ಬಾರ್ ಸ್ಪಷ್ಟನೆ ನೀಡಿದ್ದಾರೆ.

- Advertisement -


ರಾಜ್ಯಸಭಾ ಚುನಾವಣೆಗೆ ಗೈರಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಬೆಳಗ್ಗೆ ಆರೋಗ್ಯ ಸರಿ ಇರಲಿಲ್ಲ. ವೈದ್ಯರ ಸಲಹೆಯಂತೆ 6 ಗಂಟೆಗೆ ಬರಬೇಕಾಯ್ತು. ಅಸಮಾಧಾನವಿದ್ದಿದ್ದರೇ ಅಡ್ಡ ಮತದಾನ ಮಾಡುವ ಅವಕಾಶ ಇತ್ತು. ಹಾಗೆ ಮಾಡಲಿಲ್ಲ ಎಂದರು.

ನಾನು ನಾಲ್ಕು ದಶಕದಿಂದ ರಾಜಕಾರಣದಲ್ಲಿ ಇದ್ದೇನೆ. ನಾನು ಯಾರಿಗೂ ಹೆದರಿ ಮತದಾನಕ್ಕೆ ಹೋಗಿಲ್ಲ. ನಾನು ಮತದಾನಕ್ಕೆ ಹೋಗಿ ಅಡ್ಡ ಮತದಾನ ಮಾಡಬಹುದಿತ್ತು,ಇಲ್ಲವೇ ಮತದಾನ ಮಾಡದೆಯೇ ಇರಬಹುದಿತ್ತು. ನಾನು ಯಾರಿಗೂ ವಾರ್ನಿಂಗ್ ಕೊಡಲು ಹೋಗಿಲ್ಲ. ನನಗೆ ನನ್ನದೇ ಆದ ಅಸಮಾಧಾನ ಇರುವುದು ನಿಜ. ಅದು ಜಿಲ್ಲಾಮಟ್ಟದಲ್ಲಿ ಮಾತ್ರ ಎಂದು ಹೆಬ್ಬಾರ್ ಹೇಳಿದರು.



Join Whatsapp