Home ಟಾಪ್ ಸುದ್ದಿಗಳು ಮಂಗಳೂರು | ವಿಚ್ಚೇದಿತ ಮಹಿಳೆಯ ಜೊತೆ ಅಸಭ್ಯ ವರ್ತನೆ: ಶಿವರಾಜ್ ಕುಲಾಲ್ ಬಂಧನ

ಮಂಗಳೂರು | ವಿಚ್ಚೇದಿತ ಮಹಿಳೆಯ ಜೊತೆ ಅಸಭ್ಯ ವರ್ತನೆ: ಶಿವರಾಜ್ ಕುಲಾಲ್ ಬಂಧನ

ಮಂಗಳೂರು: ವಿಚ್ಛೇದಿತ ಮಹಿಳೆ ಜೊತೆ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿದ್ದಲ್ಲದೇ ಕುತ್ತಿಗೆ ಹಿಸುಕಿ ಕೊಲೆಗೈಯ್ಯಲು ಯತ್ನಿಸಿರುವ ಘಟನೆ ಮಂಗಳೂರಿನ ಬಳ್ಳಾಲ್ ಬಾಗ್ ನ ಎಂಪೈರ್ ಮಾಲ್ ನಲ್ಲಿ ನಡೆದಿದ್ದು, ಕೊಲೆಗೆ ಯತ್ನಿಸಿದ ವ್ಯಕ್ತಿಯನ್ನು ಪೋಲಿಸರು ಬಂಧಿಸಿದ್ದಾರೆ.

ಶಿವರಾಜ್ ಕುಲಾಲ್ (28 ವರ್ಷ) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.

ಪ್ರಕರಣದ ವಿವರ :
ಹಳೆಯಂಗಡಿ ಮೂಲದ 30 ವರ್ಷದ ಮಹಿಳೆಯೊಬ್ಬರಿಗೆ ಈಗಾಗಲೇ ಮದುವೆಯಾಗಿದ್ದು, ಗಂಡ ಹೆಂಡತಿ ನಡುವೆ ಮನಸ್ತಾಪ ಉಂಟಾಗಿದ್ದರಿಂದ ಸಂತ್ರಸ್ತ ಮಹಿಳೆ ಅವರ ಗಂಡನ ವಿರುದ್ಧ ವಿವಾಹ ವಿಚ್ಛೇದನೆ ಬಗ್ಗೆ ನ್ಯಾಯಾಲಯದಲ್ಲಿ ಅರ್ಜಿ ಹೂಡಿದ್ದು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುತ್ತದೆ.

ಈ ಮಧ್ಯೆ ಸುಮಾರು 2 ವರ್ಷಗಳ ಹಿಂದೆ ಆ ಮಹಿಳೆಗೆ ಸಾಮಾಜಿಕ ಜಾಲತಾಣದ ಮೂಲಕ ಶಿವರಾಜ್ ಕುಲಾಲ್ ಬಂಟ್ವಾಳ ಎಂಬವನ ಪರಿಚಯವಾಗಿ ಅವರಿಬ್ಬರು ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಸುಮಾರು 6 ತಿಂಗಳುಗಳಿಂದ ಆರೋಪಿಯು ಮಾನಸಿಕ ಹಿಂಸೆ ನೀಡಿದ್ದಲ್ಲದೇ ಮಹಿಳೆಯ ಮೈಗೆ ಕೈ ಹಾಕಿ ಮಾನ ಭಂಗ ಮಾಡಲು ಯತ್ನಿಸಿದ್ದ ಎನ್ನಲಾಗಿದೆ. ಇದರಿಂದಾಗಿ ಆ ಮಹಿಳೆ ಶಿವರಾಜ್ ಕುಲಾಲ್ ನಿಂದ ದೂರವಾಗಿದ್ದರು.

ದಿನಾಂಕ 17-05-2022 ರಂದು ಸಂಜೆ 5-30ಗಂಟೆಗೆ ಮಹಿಳೆಯು ಕೆಲಸ ಮಾಡುತ್ತಿದ್ದ ಬಳ್ಳಾಲ್ ಬಾಗ್ ನ ಎಂಪೇರ್ ಮಾಲ್ ನಲ್ಲಿರುವ ಇನ್ಸೂರೆನ್ಸ್ ಕಂಪೆನಿಗೆ ಶಿವರಾಜ್ ಕುಲಾಲ್ ಬಂದಿದ್ಧಾನೆ. ಆಕೆ ಕೆಲಸ ಮುಗಿಸಿಕೊಂಡು ಲಿಫ್ಟ್ ನಲ್ಲಿ ಕೆಳಗಡೆ ಹೋಗುವ ಸಮಯದಲ್ಲಿ ಶಿವರಾಜ್ ಕುಲಾಲ್ ನು ಮಹಿಳೆಗೆ ಬೈದು ಕೈಯಿಂದ ಹೊಡೆದು ಮಹಿಳೆಯ ಕುತ್ತಿಗೆಯನ್ನು ಹಿಡಿದು ಕೊಲೆ ಮಾಡಲು ಪ್ರಯತ್ನಿಸಿರುವುದಾಗಿ ಮಂಗಳೂರು ಮಹಿಳಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲಿಸರು ಶಿವರಾಜ್ ಕುಲಾಲ್ ಬಂಧಿಸಿದ್ದಾರೆ

Join Whatsapp
Exit mobile version