Home ಟಾಪ್ ಸುದ್ದಿಗಳು ಕೇಂದ್ರ ಸಚಿವ ಭೇಟಿ ಬಳಿಕ ಬಾಳಾ ಠಾಕ್ರೆ ಸ್ಮಾರಕವನ್ನು ಶುದ್ಧಿ ಮಾಡಿದ ಶಿವಸೇನೆ

ಕೇಂದ್ರ ಸಚಿವ ಭೇಟಿ ಬಳಿಕ ಬಾಳಾ ಠಾಕ್ರೆ ಸ್ಮಾರಕವನ್ನು ಶುದ್ಧಿ ಮಾಡಿದ ಶಿವಸೇನೆ

ಮುಂಬೈ: ಕೇಂದ್ರ ಸಚಿವ ನಾರಾಯಣ್ ರಾಣೆ ಭೇಟಿ ಕೊಟ್ಟ ಬಳಿಕ ಶಿವಸೇನಾ ಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ ಅವರ ಸ್ಮಾರಕವನ್ನು ಶಿವಸೇನಾ ಕಾರ್ಯಕರ್ತರು ಶುದ್ಧಗೊಳಿಸಿರುವ ಘಟನೆ ನಡೆದಿದ್ದು, ವಿವಾದಕ್ಕೆ ಕಾರಣವಾಗಿದೆ.


ಕೇಂದ್ರ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವ ನಾರಾಯಣ್ ರಾಣೆ ರಾಣೆ ಬಾಳಾಸಾಹೇಬರ ಜನ್ಮದಿನದಂದು ಅವರ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದ್ದರು.
ಇದಾದ ಬೆನ್ನಿಗೆ ಪಕ್ಷದ ಕಾರ್ಯಕರ್ತರು ಬಾಳಾಸಾಹೇಬರ ಸ್ಮಾರಕವನ್ನು ಗೋಮೂತ್ರ ಹಾಗೂ ಹಾಲಿನಿಂದ ಶುದ್ಧಿ ಮಾಡುವ ಕೆಲಸ ಪ್ರಾರಂಭ ಮಾಡಿದ್ದಾರೆ.


2005ರಲ್ಲಿ ಶಿವಸೇನೆ ಬಿಟ್ಟ ರಾಣೆ, 1999ರಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರು. 2019ರಲ್ಲಿ ಬಿಜೆಪಿ ಸೇರಿದ ರಾಣೆ ಇತ್ತೀಚೆಗೆ ಸಂಪುಟ ಪುನಾರಚನೆಯಲ್ಲಿ ಕೇಂದ್ರ ಮಂತ್ರಿಯಾಗಿದ್ದಾರೆ.

Join Whatsapp
Exit mobile version