“ಶರ್ಟ್ ಬಿಚ್ಚು, ಪ್ರತಿಭಟನೆ ಫವರ್ಫುಲ್ ಆಗಿರತ್ತೆ”। ಅಮಾನತ್ತಾದ ಶಾಸಕ ಸಂಗಮೇಶ್ ಗೆ ಈ ಐಡಿಯಾ ಕೊಟ್ಟವರು ಯಾರು ಗೊತ್ತೇ?

Prasthutha|

- Advertisement -

ಸದನದಲ್ಲಿ ಕಲಾಪ ನಡೆಯುತ್ತಿರುವ ವೇಳೆ ಶಾಸಕ ಸಂಗಮೇಶ್ ಅವರು ತಮಗೆ ಆಗಿರುವ ಅನ್ಯಾಯವನ್ನು ಸ್ಪೀಕರ್ ಅವರ ಗಮನಕ್ಕೆ ತರಲು ಸದನದಲ್ಲಿ ಶರ್ಟ್ ಬಿಚ್ಚಿದ ಘಟನೆ ಈಗ ಹೊಸ ತಿರುವು ಪಡೆದುಕೊಂಡಿದೆ. ಶಾಸಕರಿಗೆ ಶರ್ಟ್ ಬಿಚ್ಚುವ ಐಡಿಯಾ ಕೊಟ್ಟದ್ದು ಬೇರೆ ಯಾರೂ ಅಲ್ಲ, ಕಾಂಗ್ರೆಸ್ ಶಾಸಕ ಝಮೀರ್ ಅಹ್ಮದ್ ಎಂಬ ಗುಸುಗುಸು ವಿಧಾನಸೌಧದ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ.

ಸದನದಲ್ಲಿ ಶರ್ಟ್ ಬಿಚ್ಚಿದಕ್ಕೆ ಅಶಿಸ್ತಿನ ಪ್ರಕಟಣೆ ಎಂಬಂತೆ ಸಂಗಮೇಶ್ ಅವರನ್ನು ಸ್ಪೀಕರ್ ಕಾಗೇರಿ ಒಂದು ವಾರಕ್ಕೆ ಅಮಾನತು ಮಾಡಿದ್ದರು. ಇದಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ಶಾಸಕ ಸಭೆಯಲ್ಲೂ ಈ ವಿಷಯ ಚರ್ಚೆಯಾಗಿದೆ. ಆ ವೇಳೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಶರ್ಟ್ ಬಿಚ್ಚಲು ನಿಮ್ಮಲ್ಲಿ ಹೇಳಿದ್ದು ಯಾರು ಎಂದು ಪ್ರಶ್ನಿಸಿದ್ದಕ್ಕೆ “ ನೀನು ಶರ್ಟ್ ಬಿಚ್ಚಿ ಪ್ರತಿಭಟಿಸಿದರೆ ಹೆಚ್ಚು ಫವರ್ಫುಲ್ ಆಗಿರುತ್ತೆ ಎಂದು ಝಮೀರ್ ಹೇಳಿದ್ರು” ಎಂದು ಅಂತ ಸಂಗಮೇಶ್ ಬಾಯಿ ಬಿಟ್ಟಿದ್ದಾರೆ ಎನ್ನಲಾಗಿದೆ. ಇವೆಲ್ಲದರ ನಡುವೆ ಶಾಸಕ ಸಂಗಮೇಶ್‌ ಶರ್ಟ್‌ ಬಿಚ್ಚಿದ ಪ್ರಕರಣವನ್ನು ವಿಧಾನಸಭಾ ಸ್ಪೀಕರ್‌ ಕಾಗೇರಿಯವರು ಈಗ ಹಕ್ಕುಚ್ಯುತಿ ಸಮಿತಿಗೆ ವಹಿಸಿದ್ದಾರೆ.

Join Whatsapp