ಶಿರಾದಲ್ಲೂ ಅರಳಿತು ಕಮಲ | ಬಿಜೆಪಿಗೆ ಮತ್ತೊಂದು ಭರ್ಜರಿ ಜಯ

Prasthutha|

ತುಮಕೂರು : ರಾಜ್ಯ ಉಪಚುನಾವಣೆಯಲ್ಲಿ ಬಾರೀ ಗಮನ ಸೆಳೆದಿದ್ದ ಶಿರಾ ಕ್ಷೇತ್ರದಲ್ಲಿಯೂ ಬಿಜೆಪಿ ವಿಜಯ ಸಾಧಿಸಿದೆ. ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಭರ್ಜರಿ ಜಯ ಬಾರಿಸಿದ್ದಾರೆ. ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆಯೊಂದೇ ಬಾಕಿಯುಳಿದಿದೆ.

ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ. ಜಯಚಂದ್ರ ವಿರುದ್ಧ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ 12,418 ಮತಗಳ ಅಂತರದಿಂದ ಗೆಲುವು ಪಡೆದುಕೊಂಡಿದ್ದಾರೆ. ಬಿಜೆಪಿಯ ರಾಜೇಶ್ ಗೌಡ 72,739 ಮತಗಳನ್ನು ಪಡೆದಿದ್ದರೆ, ಟಿ.ಬಿ. ಜಯಚಂದ್ರ 60,321 ಮತಗಳನ್ನು ಪಡೆದುಕೊಂಡಿದ್ದಾರೆ.  

- Advertisement -

ಜೆಡಿಎಸ್ ನ ಅಮ್ಮಾಜಮ್ಮ 34,707 ಮತಗಳನ್ನು ಪಡೆದುಕೊಂಡಿದ್ದಾರೆ

- Advertisement -