Home ಟಾಪ್ ಸುದ್ದಿಗಳು ಶಿವಮೊಗ್ಗ: ಬೇಕರಿಯಲ್ಲಿ ಕೆಲವೇ ನಿಮಿಷದಲ್ಲಿ 3 ಬಾರಿ ಸ್ಫೋಟ..!

ಶಿವಮೊಗ್ಗ: ಬೇಕರಿಯಲ್ಲಿ ಕೆಲವೇ ನಿಮಿಷದಲ್ಲಿ 3 ಬಾರಿ ಸ್ಫೋಟ..!

ಶಿವಮೊಗ್ಗ: ಬೇಕರಿಯಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡು ಎಲ್ ಪಿಜಿ ಸಿಲಿಂಡರ್ ಸ್ಫೋಟವಾದ ಘಟನೆ ಶಿವಮೊಗ್ಗ ತಾಲೂಕಿನ ಆಯನೂರಿನ ಎಸ್ ಎಲ್ವಿ ಅಯ್ಯಂಗಾರ್ ಬೇಕರಿಯಲ್ಲಿ ನಡೆದಿದೆ.


ಕೆಲವೇ ನಿಮಿಷದಲ್ಲಿ 3 ಬಾರಿ ಸ್ಫೋಟವಾಗಿದ್ದು, ಬೇಕರಿಯಲ್ಲಿದ್ದ ಎಲ್ಲಾ ವಸ್ತುಗಳು ಬೆಂಕಿಗಾಹುತಿಯಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಈ ಕುರಿತು ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.


ಆಕಸ್ಮಿಕ ಬೆಂಕಿ ಹೊತ್ತಿಕೊಂಡು ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡಿದ್ದು, ಬೇಕರಿ ಮಾಲೀಕನಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಇನ್ನು ಗ್ಯಾಸ್ ಸಿಲಿಂಡರ್ ಸ್ಪೋಟದಿಂದ ದೊಡ್ಡ ದುರಂತ ತಪ್ಪಿದೆ. ಬೇಕರಿ ಪಕ್ಕದಲ್ಲೇ ಪೇಟ್ರೋಲ್ ಬಂಕ್ ಇತ್ತು. ಅದೃಷ್ಟವಶಾತ್ ಯಾವುದೇ ತೊಂದರೆಯಾಗಿಲ್ಲ.

Join Whatsapp
Exit mobile version