Home ಟಾಪ್ ಸುದ್ದಿಗಳು ಶಿವಮೊಗ್ಗ: ಜೆಸಿ ಆಸ್ಪತ್ರೆಯಲ್ಲಿ ಹೆಚ್ಚಿದ ಕಳ್ಳರ ಹಾವಳಿ

ಶಿವಮೊಗ್ಗ: ಜೆಸಿ ಆಸ್ಪತ್ರೆಯಲ್ಲಿ ಹೆಚ್ಚಿದ ಕಳ್ಳರ ಹಾವಳಿ

ತೀರ್ಥಹಳ್ಳಿ: ನಗರದ ಜೆಸಿ ಆಸ್ಪತ್ರೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಇಲ್ಲದೇ ಕಳ್ಳರ ಹಾವಳಿ ಶುರುವಾಗಿದೆ ಎಂದು ತಿಳಿದು ಬಂದಿದೆ.


ರೋಗಿಯ ಕಡೆಯವನು ಎಂದು ಹೇಳಿ ಆಸ್ಪತ್ರೆಯ ಒಳಗೆ ಬಂದ ಯುವಕನೊಬ್ಬ ರೋಗಿಯೊಬ್ಬರ ಮೊಬೈಲ್ ಕಳ್ಳತನ ಮಾಡಲು ಯತ್ನಿಸಿದ್ದ. ಆದರೆ ಆಸ್ಪತ್ರೆಯ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಯಾವುದೇ ಅನಾಹುತ ನಡೆಯಲಿಲ್ಲ ಎನ್ನಲಾಗಿದೆ.

ಈ ಘಟನೆಯಿಂದ ವಿಷಯ ತಿಳಿದ ರೋಗಿ, ಮತ್ತು ರೋಗಿಯ ಕಡೆಯವರು ಭಯಭೀತರಾಗಿದ್ದಾರೆ. ಒಂದೇ ವಾರದಲ್ಲಿ ಎರಡು ಘಟನೆಗಳು ಜೆಸಿ ಆಸ್ಪತ್ರೆಯಲ್ಲಿ ನಡೆದಿದೆ ಎಂಬ ಮಾತು ಸಾರ್ವಜನಿಕವಾಗಿ ಕೇಳಿ ಬರುತ್ತಿದೆ.

Join Whatsapp
Exit mobile version