Home ಟಾಪ್ ಸುದ್ದಿಗಳು ಶಿವಮೊಗ್ಗದಲ್ಲಿ ಬಸ್ಸುಗಳ ಮುಖಾಮುಖಿ : ಹಲವರಿಗೆ ಗಂಭೀರ ಗಾಯ

ಶಿವಮೊಗ್ಗದಲ್ಲಿ ಬಸ್ಸುಗಳ ಮುಖಾಮುಖಿ : ಹಲವರಿಗೆ ಗಂಭೀರ ಗಾಯ

ಶಿವಮೊಗ್ಗ: ಶಿವಮೊಗ್ಗದ ಹೊರವಲಯ ಉಂಬ್ಳೆಬೈಲು ಸಮೀಪದಲ್ಲಿ ಕೆ.ಎಸ್ ಆರ್ ಟಿ.ಸಿ ಬಸ್ ಮತ್ತು ಖಾಸಗಿ ಬಸ್ ಮುಖಾಮುಖಿಯಾಗಿದ್ದು ಮೂವತ್ತಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಖಾಸಗಿ ಬಸ್ ಎನ್ ಆರ್ ಪುರ ದಿಂದ ಶಿವಮೊಗ್ಗದ ಕಡೆ ಬರುತ್ತಿದ್ದು, ಕೆ ಎಸ್ ಆರ್ ಟಿ ಸಿ ಬಸ್ ಶಿವಮೊಗ್ಗದ ಕಡೆಯಿಂದ ಕೊಪ್ಪ ಕಡೆಗೆ ತೆರಳುತ್ತಿತ್ತು. ಈ ಘಟನೆ ಉಂಬ್ಳೇಬೈಲು ಸಮೀಪ ನಡೆದಿದ್ದು,  ರಸ್ತೆ ತಿರುವು ಹೊಂದಿದ್ದು ಎರಡೂ ಕಡೆಗಳಿಂದ ವೇಗವಾಗಿ ಚಲಿಸುತ್ತಿದ್ದ ಬಸ್ ಗಳು ಆಕಸ್ಮಿಕವಾಗಿ ಎದುರಾದ ಪರಿಣಾಮ ಈ ಅಪಘಾತ ನಡೆದಿದೆ ಎನ್ನಲಾಗಿದೆ. ಮತ್ತು ಅಪಘಾತ ಸಂಜೆ ವೇಳೆಯಾದ್ದರಿಂದ ಮನೆಗೆ ಪ್ರಯಾಣಿಸುತ್ತಿದ್ದ ಅಧಿಕ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

Join Whatsapp
Exit mobile version