Home ಟಾಪ್ ಸುದ್ದಿಗಳು ಶಿವಮೊಗ್ಗ: ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ; ವಿದ್ಯಾರ್ಥಿಗಳಿಂದ ಮೂಡಿದ ಸುಂದರ ಭಾರತದ ನಕ್ಷೆ

ಶಿವಮೊಗ್ಗ: ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ; ವಿದ್ಯಾರ್ಥಿಗಳಿಂದ ಮೂಡಿದ ಸುಂದರ ಭಾರತದ ನಕ್ಷೆ

ಸೊರಬ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಜಡೆ ಗ್ರಾಮ ಪಂಚಾಯಿತಿಯಿಂದ ಹರ್ ಘರ್ ತಿರಂಗಾ ಕಾರ್ಯಕ್ರಮ ನಡೆಯಿತು.


ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢ ಶಾಲೆ ಸೇರಿ 1,200ಕ್ಕೂ ಅಧಿಕ ವಿದ್ಯಾರ್ಥಿಗಳನ್ನುಕೇಸರಿ, ಬಿಳಿ ಹಾಗೂ ಹಸಿರು ಟೋಪಿ ಧರಿಸಿ ಭಾರತದ ನಕ್ಷೆ ಹೋಲುವಂತೆ ನಿಲ್ಲಿಸಲಾಗಿತ್ತು.


ಎಲ್ಲ ವಿದ್ಯಾರ್ಥಿಗಳು ಏಕಕಾಲಕ್ಕೆ ರಾಷ್ಟ್ರಗೀತೆ ಹಾಡುವ ಮೂಲಕ ದೇಶಕ್ಕೆ ವಿಶೇಷ ಗೌರವ ಸಲ್ಲಿಸಿದರು.
ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಕೆ.ಜಿ.ಕುಮಾರ್, ಪ್ರಭಾರ ಬಿಇಒ ಮನಹೋರ, ಜಡೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೇಶವ, ಪಿಡಿಒ ಚಿದಾನಂದ ಸೇರಿ ವಿವಿಧ ಶಾಲೆಯ ಮುಖ್ಯಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಇದ್ದರು.

Join Whatsapp
Exit mobile version