Home ಟಾಪ್ ಸುದ್ದಿಗಳು ಶಿವಮೊಗ್ಗ ಬಜರಂಗದಳದ ಹರ್ಷ ಸಹೋದರಿಗೆ ಬೈದು ಕಳುಹಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ: ವೀಡಿಯೋ ವೈರಲ್

ಶಿವಮೊಗ್ಗ ಬಜರಂಗದಳದ ಹರ್ಷ ಸಹೋದರಿಗೆ ಬೈದು ಕಳುಹಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ: ವೀಡಿಯೋ ವೈರಲ್

ಬೆಂಗಳೂರು: ಶಿವಮೊಗ್ಗದಲ್ಲಿ ಹತ್ಯೆಯಾದ ಬಜರಂಗದಳ ಕಾರ್ಯಕರ್ತ ಹರ್ಷನ ಸಹೋದರಿ ಅಶ್ವಿನಿ ಅವರು ಗೃಹ ಸಚಿವ ಆರಗ ಜ್ಞಾನೇಂದ್ರ ರನ್ನು ಭೇಟಿ ಮಾಡಿದ ಸಂದರ್ಭ ಗೃಹ ಸಚಿವರು ಬೈದು ಹೊರಗಡೆ ಕಳುಹಿಸಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೀಡಿಯೋದಲ್ಲಿ ಗೃಹ ಸಚಿವರು ಹರ್ಷನ ಸಹೋದರಿಯನ್ನು ಬೈದು ಹೊರಗಡೆ ಕಳಿಸಿದ್ದು, ಇದಕ್ಕೆ ಅಶ್ವಿನಿ ನನಗೆ ಇಲ್ಲಿ ಸ್ವಲ್ಪವೂ ಮರ್ಯಾದೆ ಇಲ್ಲ. ನಾವು ಇಲ್ಲಿ ಏನು ನಡೆಯುತ್ತದೆ ಎಂದು ಕೇಳುವುದು ತಪ್ಪಾ? ನ್ಯಾಯ ಕೇಳುವುದು ತಪ್ಪಾ? ಎಲ್ಲೂ ನ್ಯಾಯ ಸಿಗಲ್ಲ ಎಂದು ಹೇಳಿ, ನನಗೆ ರೆಸ್ಪಾನ್ಸ್ ಕೊಡದೆ ಜೋರು ಮಾಡಿ ಕಳುಹಿಸುವುದು ಎಷ್ಟು ಸರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಫೆಬ್ರವರಿ 20ರಂದು ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ನಡೆದಿತ್ತು.

Join Whatsapp
Exit mobile version