Home ಟಾಪ್ ಸುದ್ದಿಗಳು ಶಿವಮೊಗ್ಗ ಹರ್ಷ ಕೊಲೆ ಪ್ರಕರಣ: NIA ಗೆ ಹಸ್ತಾಂತರ

ಶಿವಮೊಗ್ಗ ಹರ್ಷ ಕೊಲೆ ಪ್ರಕರಣ: NIA ಗೆ ಹಸ್ತಾಂತರ

ಬೆಂಗಳೂರು: ಶಿವಮೊಗ್ಗದ ಹರ್ಷ ಕೊಲೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ ತನಿಖೆಗೆ ಸರ್ಕಾರ ವಹಿಸಿದೆ. ಎನ್‍ ಐಎ ಈಗಾಗಲೇ  ಈ ಪ್ರಕರಣದ ಕುರಿತು ಎಫ್‍ ಐಆರ್ ದಾಖಲಿಸಿಕೊಂಡಿದೆ.

ಫೆಬ್ರವರಿ 20 ರಂದು ಶಿವಮೊಗ್ಗದ ಸೀಗೆಹಟ್ಟಿಯಲ್ಲಿ ನಡೆದಿದ್ದ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 10 ಮಂದಿ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಶೀಘ್ರದಲ್ಲಿಯೇ ಶಿವಮೊಗ್ಗಕ್ಕೆ ಎನ್‍ ಐಎ ಅಧಿಕಾರಿಗಳು ಆಗಮಿಸಲಿದ್ದಾರೆ. ಇಷ್ಟು ದಿನ ಬಂಧಿತ ಆರೋಪಿಗಳನ್ನು ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ಪ್ರತ್ಯೇಕ ಸೆಲ್‍ ನಲ್ಲಿರಿಸಲಾಗಿತ್ತು. ಇದೀಗ ಕಳೆದ ಮೂರು ದಿನದ ಹಿಂದೆ ನಾಲ್ಕು ಮಂದಿ ಮೈಸೂರು ಕಾರಾಗೃಹಕ್ಕೆ, ನಾಲ್ಕು ಮಂದಿ ಬಳ್ಳಾರಿ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಉಳಿದ ಇಬ್ಬರು ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿದ್ದು, ಅವರನ್ನು ಶೀಘ್ರದಲ್ಲೇ ಬೆಳಗಾವಿ ಕಾರಾಗೃಹಕ್ಕೆ ಸ್ಥಳಾಂತರಿಸಲಿದ್ದಾರೆ. ಆದರೆ ಇದೀಗ ಸರ್ಕಾರ ಪ್ರಕರಣವನ್ನು ಎನ್‍ ಐಎಗೆ ವಹಿಸಿದೆ.

Join Whatsapp
Exit mobile version