Home ಟಾಪ್ ಸುದ್ದಿಗಳು ಶಿವಮೊಗ್ಗ: ಶಿಕ್ಷಕಿ ಫೌಝಿಯ ಸರವತ್ ಗೆ ರಾಜ್ಯ ಉತ್ತಮ ಶಿಕ್ಷಕಿ ಪ್ರಶಸ್ತಿ

ಶಿವಮೊಗ್ಗ: ಶಿಕ್ಷಕಿ ಫೌಝಿಯ ಸರವತ್ ಗೆ ರಾಜ್ಯ ಉತ್ತಮ ಶಿಕ್ಷಕಿ ಪ್ರಶಸ್ತಿ

ಶಿವಮೊಗ್ಗ: ಇಲ್ಲಿನ ಸಣ್ಣ ಶಾಲೆಯ ಶಿಕ್ಷಕಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಲಭಿಸಿದೆ.


ಹೊಸನಗರ ತಾಲೂಕು ಅರಸಾಳು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಫೌಝಿಯ ಸರವತ್ ಅವರು ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.


ಈ ಬಗ್ಗೆ ಪ್ರತಿಕ್ರಿಯಿಸಿದ ಫೌಝಿಯ ಸರವತ್ ಅವರು, ನನಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಲಭಿಸಿದ್ದು ತುಂಬ ಸಂತೋಷವಾಗಿದೆ. ಮಲೆನಾಡ ಹೆಬ್ಬಾಗಿಲು, ಕವಿಗಳ ಬೀಡು ಎಂದು ಪ್ರಸಿದ್ದವಾಗಿರುವ ಶಿವಮೊಗ್ಗ ಜಿಲ್ಲೆಯಿಂದ ಪ್ರಶಸ್ತಿಗೆ ಆಯ್ಕೆಯಾಗಿದ್ದೇನೆ. ಈ ಜಿಲ್ಲೆಯ ಮೂಲಕ ನಾನು ಗುರುತಿಸಿಕೊಂಡಿರುವಂತಹದ್ದು ತುಂಬ ಹೆಮ್ಮೆಯ ವಿಚಾರ ಎಂದರು.


ಇಂದು ನಾನು ಉತ್ತಮ ಶಿಕ್ಷಕಿಯಾಗಿ ಹೊರಹೊಮ್ಮಲು ಮುಖ್ಯ ಕಾರಣ ನನ್ನ ನೆಚ್ಚಿನ ವಿದ್ಯಾರ್ಥಿಗಳು. ವಿದ್ಯಾರ್ಥಿಗಳು ನನ್ನನ್ನು ಉತ್ತಮ ಶಿಕ್ಷಕಿ ಎಂದು ಗುರುತಿಸದೆ ಹೋಗಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ಜೊತೆಗೆ ಶಿಕ್ಷಣ ಇಲಾಖೆಯು ನನಗೆ ಸಾಕಷ್ಟು ಕೆಲಸ ಮಾಡಿಕೊಡಲು ಅವಕಾಶ ಮಾಡಿಕೊಟ್ಟಿದೆ ಎಂದು ಹೇಳಿದ್ದಾರೆ..

Join Whatsapp
Exit mobile version