Home ಟಾಪ್ ಸುದ್ದಿಗಳು ಶಿವಮೊಗ್ಗ: 1 ಗಂಟೆ ಪೊಲೀಸ್ ಆದ 8 ವರ್ಷದ ಪುಟ್ಟ ಬಾಲಕ ಆಝಾನ್ ಖಾನ್

ಶಿವಮೊಗ್ಗ: 1 ಗಂಟೆ ಪೊಲೀಸ್ ಆದ 8 ವರ್ಷದ ಪುಟ್ಟ ಬಾಲಕ ಆಝಾನ್ ಖಾನ್

ಶಿವಮೊಗ್ಗ: ಎಂಟೂವರೆ ವರ್ಷದ ಪುಟ್ಟ ಬಾಲಕ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯ ಪೊಲೀಸ್ ಆಗಿ ಒಂದು ಗಂಟೆ ಕರ್ತವ್ಯ ನಿರ್ವಹಿಸಿದ್ದು ವಿಶೇಷವಾಗಿತ್ತು.


ಈ ಬಾಲಕನ ಹೆಸರು ಆಜಾನ್ ಖಾನ್. ಈತ ಈಗ 1 ನೇ ತರಗತಿಯಲ್ಲಿ ಓದುತ್ತಿದ್ದಾನೆ. ಪೊಲೀಸ್ ಠಾಣೆಗೆ ಬಂದು ತನ್ನ ಆಸೆಯಂತೆ ಪೊಲೀಸ್ ಆಗಿ ಕರ್ತವ್ಯ ನಿರ್ವಹಿಸಿದನು. ಠಾಣೆಗೆ ಬಂದಾಗ ಖುದ್ದು ಎಸ್ಪಿ ಅವರು ಹೂವಿನ ಬೊಕ್ಕೆ ನೀಡಿ ವೆಲ್ಕಮ್ ಮಾಡಿಕೊಂಡರು. ನಂತರ ಠಾಣೆ ಒಳಗೆ ಹೋಗಿ ಪೊಲೀಸ್ ಖುರ್ಚಿಯಲ್ಲಿ ಕುಳಿತು ಕೊಂಡು ಠಾಣೆಯ ಸಿಬ್ಬಂದಿಯನ್ನು ಕರೆಯಿಸಿ ರೂಲ್ ಕಾಲ್ ನಡೆಸಲಾಯಿತು.


ಸಿಬ್ಬಂದಿಯ ಕುಂದು ಕೂರತೆ ಆಲಿಸಿದ್ದು, ಈ ವೇಳೆ ಮಹಿಳಾ ಪೊಲೀಸ್ ಪೇದೆಯು ಒಂದು ದಿನ ರಜೆ ಬೇಕು ಎಂದಾಗ ಅವರಿಗೆ ಆಜಾನ್ ಖಾನ್ ಒಂದು ದಿನ ಯಾಕೆ ಎರಡು ದಿನ ರಜೆ ತೆಗೆದುಕೊಳ್ಳಿ ಎಂದು ರಜೆ ನೀಡಿದ್ದಾನೆ.


ಠಾಣೆಗೆ ಬಂದ ನಂತರ ರಿಜಿಸ್ಟಾರ್ ನಲ್ಲಿ ಸಹಿ ಮಾಡಿ, ವಿವಿಧ ಐಪಿಸಿ ಕಾಯ್ದೆಯ ಬಗ್ಗೆ ಮಾಹಿತಿ ಪಡೆದುಕೊಂಡ. ನಂತರ ಸಿಬ್ಬಂದಿಯನ್ನು ಕರೆಯಿಸಿ ಇಂದು ಏನೇನೂ ಕರ್ತವ್ಯ ನಿರ್ವಹಿಸಿದ್ದಿರಿ ಎಂದು ಪ್ರಶ್ನಿಸಿದ್ದಾನೆ. ಶಿವಮೊಗ್ಗದ ಊರುಗಡೂರಿನ ತಬ್ರೇಜ್ ಖಾನ್ ಹಾಗೂ ನಗ್ಮಾ ದಂಪತಿಯ ದ್ವಿತೀಯ ಪುತ್ರನೇ ಈ ಆಜಾನ್ ಖಾನ್. ಈತ ಹುಟ್ಟಿನಿಂದಲೇ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾನೆ. ಆಜಾನ್ ಗೆ ಪೊಲೀಸ್ ಆಗಬೇಕೆಂಬ ಆಸೆಯನ್ನೂ ವ್ಯಕ್ತಪಡಿಸಿದ್ದಾನೆ. ಈತನ ಪೋಷಕರು ಶಿವಮೊಗ್ಗ ಜಿಲ್ಲಾ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಅವರ ಬಳಿ ಬಂದು ತಮ್ಮ ಮಗನ ಸ್ಥಿತಿಯನ್ನು ವಿವರಿಸಿದ್ದಾರೆ.


ಬಾಲಕ ಆಜಾನ್ ಖಾನ್ ಪರಿಸ್ಥಿತಿ ಹಾಗೂ ಪೋಷಕರ ಕೋರಿಕೆ ಮೇಲೆ ಆತನ ಆಸೆಯಂತೆ ಶಿವಮೊಗ್ಗ ಜಿಲ್ಲೆಯ ಇತಿಹಾಸದಲ್ಲಿಯೇ ಪ್ರಥಮ ಭಾರಿಗೆ ಬಾಲಕನೋರ್ವ ಪೊಲೀಸ್ ಆಗಿ ಕರ್ತವ್ಯ ನಿರ್ವಹಿಸಿದ್ದಾನೆ.

Join Whatsapp
Exit mobile version