Home ಟಾಪ್ ಸುದ್ದಿಗಳು ಶಿಮ್ಲಾ: ಮನೆಯಂಗಳದಲ್ಲಿದ್ದ ಐದು ವರ್ಷದ ಮಗುವನ್ನು ಹೊತ್ತೊಯ್ದ ಚಿರತೆ

ಶಿಮ್ಲಾ: ಮನೆಯಂಗಳದಲ್ಲಿದ್ದ ಐದು ವರ್ಷದ ಮಗುವನ್ನು ಹೊತ್ತೊಯ್ದ ಚಿರತೆ

ನವದೆಹಲಿ: ಶಿಮ್ಲಾದ ಲಾಲ್ಪಾನಿ ಎಂಬಲ್ಲಿ ಐದರ ಹರೆಯದ ಬಾಲಕನನ್ನು ಮನೆಯಂಗಳದಲ್ಲಿ ಆಟವಾಡುತ್ತಿದ್ದ ವೇಳೆ ಚಿರತೆಯೊಂದು ಹೊತ್ತೊಯ್ದ ಘಟನೆ ವರದಿಯಾಗಿದೆ. ಪ್ರಸಕ್ತ ದೀಪಾವಳಿ ಸಂಭ್ರಮಾಚರಣೆಯಲ್ಲಿದ್ದ ಕುಟುಂಬಕ್ಕೆ ಸೂತಕದ ಛಾಯೆ ಆವರಿಸಿದೆ.

ಮಗುವಿನ ಮೃತದೇಹವನ್ನು ಪತ್ತೆಹಚ್ಚಲು ಸಾಧ್ಯಸಾಧ್ಯವಾಗದಿದ್ದರೂ, ಸಮೀಪದ ಕಾಡಿನಲ್ಲಿ ರಕ್ತದ ಕುರುಹುಗಳು ಕಂಡುಬಂದಿವೆ. ಘಟನೆಯನ್ನು ಶಿಮ್ಲಾದ ಅರಣ್ಯಾಧಿಕಾರಿ ರವಿಶಂಕರ್ ಖಚಿತಪಡಿಸಿದ್ದಾರೆ. ಘಟನಾ ಸಂಬಂಧ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

ಯೋಗರಾಜ್ ಎಂಬ ಐದರ ಹರೆಯದ ಮಗು ಮನೆಯಂಗಳದಲ್ಲಿ ಆಟವಾಡುತ್ತಿದ್ದಾಗ ಸುಮಾರು 8 ಗಂಟೆಗೆ ಚಿರತೆ, ಮಗುವನ್ನು ಹೊತ್ತೊಯ್ದ ಮಾಹಿತಿ ಲಭಿಸಿದೆ ಎಂದು ಸ್ಥಳೀಯ ಕೌನ್ಸಿಲರ್ ಜಗಜಿತ್ ಸಿಂಗ್ ಬಗ್ಗಾ ತಿಳಿಸಿದ್ದಾರೆ.

ಶಿಮ್ಲಾದಲ್ಲಿ ಚಿರತೆ ಮಕ್ಕಳ ಮೇಲೆ ದಾಳಿ ನಡೆಸಿರುವುದು ಇದೇನು ಹೊಸತಲ್ಲ. ಕೆಲವು ತಿಂಗಳ ಹಿಂದೆ ಎಂಟರ ಹರೆಯದ ಪುಟ್ಟ ಬಾಲಕಿಯನ್ನು ಕೊಂದು ಹಾಕಿದ್ದು, ಆಕೆಯ ಅವಶೇಷಗಳು ಕಾಡಿನಲ್ಲಿ ಪತ್ತೆಯಾಗಿದ್ದವು

Join Whatsapp
Exit mobile version