Home ಟಾಪ್ ಸುದ್ದಿಗಳು ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ: ಸಂವಿಧಾನ ವಿರೋಧಿ ಕ್ರಮ ಎಂದ ಶಶಿ ತರೂರ್

ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ: ಸಂವಿಧಾನ ವಿರೋಧಿ ಕ್ರಮ ಎಂದ ಶಶಿ ತರೂರ್

ತಿರುವನಂತಪುರ: ರಾಜ್ಯದ ಖಾಸಗಿ ಉದ್ಯಮಗಳ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ಮಸೂದೆಯನ್ನು ಮಂಡಿಸಿ ಜಾರಿ ಮಾಡಲು ಹೊರಟಿದ್ದ ರಾಜ್ಯ ಸರ್ಕಾರದ ಕ್ರಮವು ಸಂವಿಧಾನ ವಿರೋಧ ಹಾಗೂ ವಿವೇಚನಾರಹಿತ ಕ್ರಮ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.


ಜತೆಗೆ, ಘೋಷಿಸಿದ ಕ್ರಮದಿಂದ ಹಿಂದೆ ಸರಿದ ಸಿದ್ದರಾಮಯ್ಯ ಸರ್ಕಾರದ ಕ್ರಮ ಕುರಿತೂ ತರೂರ್ ಸಂತಸ ವ್ಯಕ್ತಪಡಿಸಿದ್ದಾರೆ.


‘ಸಂವಿಧಾನದ ಪ್ರಕಾರ ದೇಶದ ಪ್ರತಿಯೊಬ್ಬ ಪ್ರಜೆಗೂ ದೇಶದೊಳಗೆ ಸ್ವತಂತ್ರವಾಗಿ ಬದುಕುವ, ವೃತ್ತಿ ಕೈಗೊಳ್ಳುವ ಹಾಗೂ ಸಂಚರಿಸುವ ಮುಕ್ತ ಅವಕಾಶವನ್ನು ನೀಡಲಾಗಿದೆ. ಒಂದೊಮ್ಮೆ ಎಲ್ಲಾ ರಾಜ್ಯಗಳು ಇಂಥ ಕಾನೂನು ಜಾರಿಗೆ ತರಲು ಹೊರಟರೆ ಅದು ಸಂವಿಧಾನ ವಿರೋಧಿಯಾಗಲಿದೆ. ಹೀಗಾಗಿ ಕರ್ನಾಟಕದ ಮುಖ್ಯಮಂತ್ರಿಯದ್ದು ಬುದ್ಧಿವಂತಿಕೆಯ ನಿರ್ಧಾರವಲ್ಲ’ ಎಂದಿದ್ದಾರೆ.

Join Whatsapp
Exit mobile version