ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಟಿಪ್ಪು ಸುಲ್ತಾನ್ ಫೋಟೋವನ್ನು ಅಸಹ್ಯಕರವಾದ ರೀತಿಯಲ್ಲಿ ಎಡಿಟ್ ಮಾಡಿ ಹರಿಯಬಿಡಲಾಗಿದ್ದು, ಸಿಎಂನ್ನು ಟಿಪ್ಪು ಸುಲ್ತಾನ್ ದತ್ತುಪುತ್ರ, ದಾಸಿ ಪುತ್ರ ಎಂದು ಬರೆದು ಫೋಟೋ ಎಡಿಟ್ ಮಾಡಿ ಮುಖ್ಯಮಂತ್ರಿಗಳ ಗೌರವಕ್ಕೆ ಚ್ಯುತಿ ತರಲಾಗಿದೆ.
ಈ ಸಂಬಂಧ ಸಾಕ್ಷಿ ಸಮೇತ ಶಶಾಂಕ್ ಗೌಡ ದೂರು ನೀಡಿದ್ದಾರೆ. ಸದ್ಯ ಎಫ್ ಬಿಯಲ್ಲಿರುವಂತಹ ಇಂತಹ ಪೋಸ್ಟ್ ಗಳನ್ನೂ ಕೂಡ ಪೊಲೀಸರು ಡಿಲೀಟ್ ಮಾಡಿದ್ದಾರೆ. ಈ ಸಂಬಂಧ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಿಎಂರನ್ನು ನಿಂದನೆ ಮಾಡಿದ್ದಲ್ಲದೆ, ಎಡಿಟ್ ಫೋಟೋಗಳನ್ನು ಯತೀಂದ್ರ ಸಿದ್ದರಾಮಯ್ಯ ಅಭಿಮಾನಿ ಬಳಗ ಎಂಬ ಹೆಸರಿನ ಫೇಸ್ ಬುಕ್ ಪೇಜ್‌ನಿಂದಲೇ ಬಿಡುಗಡೆಗೊಳಿಸಲಾಗಿದೆ. ಮಗನಿಂದಲೇ ಅಪ್ಪನ ನಿಂದನೆ ಎಂಬಂತೆ ಬಿಂಬಿಸುವ ಮೂಲಕ ವಿಕೃತಿ ಮೆರೆಯಲಾಗಿದೆ.
ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕುಸುಮಾ ಹನುಮಂತರಾಯಪ್ಪ ಹಾಗೂ ಸಂಸದ ಡಿಕೆ ಸುರೇಶ್ ಅವರ ಫೋಟೋ ಹಾಕಿ ವೈಯುಕ್ತಿಕವಾಗಿ ನಿಂದಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹರಿ ಬಿಡಲಾಗಿದೆ.