Home ಟಾಪ್ ಸುದ್ದಿಗಳು ನವದೆಹಲಿ । ಪ್ರಧಾನಿ ಮೋದಿ – ಶರದ್ ಪವಾರ್ ಭೇಟಿ; ಮಹಾರಾಷ್ಟ್ರದ ಪ್ರಸಕ್ತ ಬೆಳವಣಿಗೆ ಕುರಿತು...

ನವದೆಹಲಿ । ಪ್ರಧಾನಿ ಮೋದಿ – ಶರದ್ ಪವಾರ್ ಭೇಟಿ; ಮಹಾರಾಷ್ಟ್ರದ ಪ್ರಸಕ್ತ ಬೆಳವಣಿಗೆ ಕುರಿತು ಮಾತುಕತೆ

ನವದೆಹಲಿ: ಇಂದು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ಎನ್.ಸಿ.ಪಿ ಮುಖಂಡ ಶರದ್ ಪವಾರ್, ಪ್ರಸಕ್ತ ಮಹಾರಾಷ್ಟ್ರದ ಆಡಳಿತರೂಢ ಸಮ್ಮಿಶ್ರ ನಾಯಕರ ವಿರುದ್ಧ ಕೇಂದ್ರ ತನಿಖಾ ಸಂಸ್ಥೆಗಳು ಕೈಗೊಂಡಿರುವ ಕ್ರಮವನ್ನು ಪ್ರಸ್ತಾಪಿಸಿ ಮಾತುಕತೆ ನಡೆಸಿದ್ದಾರೆ.

ಶಿವಸೇನಾ ನಾಯಕ ಸಂಜಯ್ ರಾವುತ್ ಅವರ ಪತ್ನಿ ಮತ್ತು ಇಬ್ಬರು ಸಹಚರರಿಗೆ ಸೇರಿದ ರೂ. 11.15 ಕೋಟಿಗೂ ಅಧಿಕ ಮೌಲ್ಯದ ಭೂ ವ್ಯವಹಾರ ಮತ್ತು ಆಸ್ತಿಯನ್ನು ಇಡಿ ಅಧಿಕಾರಿಗಳು ವಶಪಡಿಸಿಕೊಂಡ ಒಂದು ದಿನದ ಬಳಿಕ ಉಭಯ ನಾಯಕರು ಸಂಸತ್ತಿನಲ್ಲಿ ಸುಮಾರು 20 ನಿಮಿಷ ಮಾತುಕತೆ ನಡೆಸಿದ್ದಾರೆ.


ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಶರದ್ ಪವಾರ್, ರಾವುತ್ ಅವರ ವಿರುದ್ಧ ನಡೆದ ದಾಳಿಯ ಕುರಿತು ಪ್ರಧಾನಿಯ ಬಳಿ ಮಾತುಕತೆ ನಡೆಸಿರುವುದಾಗಿ ತಿಳಿಸಿದ್ದಾರೆ.

ಈ ಮಧ್ಯೆ ಇಂದು ಬೆಳಗ್ಗೆ ಎನ್.ಸಿ.ಪಿ ಮತ್ತೊಬ್ಬ ನಾಯಕ, ಮಾಜಿ ಗೃಹ ಸಚಿವ ಅನಿಲ್ ದೇಶ್ ಮುಖ್ ಅವರನ್ನು ಸಿಬಿಐ ವಶಕ್ಕೆ ಪಡೆದಿತ್ತು. ಮಹಾರಾಷ್ಟ್ರದಲ್ಲಿ ನಡೆದ ಈ ಎಲ್ಲಾ ರಾಜಕೀಯ ಬೆಳವಣಿಗೆಯ ಮಧ್ಯೆ ಪ್ರಧಾನಿ – ಶರದ್ ಪವಾರ್ ಭೇಟಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ.

Join Whatsapp
Exit mobile version