Home ಟಾಪ್ ಸುದ್ದಿಗಳು ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಪ್ರಕರಣ : ಆರೋಪಿ ಶಂಕರ್ ಮಿಶ್ರಾಗೆ ಜಾಮೀನು

ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಪ್ರಕರಣ : ಆರೋಪಿ ಶಂಕರ್ ಮಿಶ್ರಾಗೆ ಜಾಮೀನು

ನವದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶಂಕರ್ ಮಿಶ್ರಾಗೆ ದೆಹಲಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.


ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಹರ್ಜ್ಯೋತ್ ಸಿಂಗ್ ಭಲ್ಲಾ ಅವರು 1 ಲಕ್ಷ ರೂಪಾಯಿಗಳ ವೈಯಕ್ತಿಕ ಬಾಂಡ್ ಮೇಲೆ ಜಾಮೀನು ನೀಡಿದ್ದಾರೆ.


ಜನವರಿ 11 ರಂದು ಮಿಶ್ರಾ ಅವರಿಗೆ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಜಾಮೀನು ನಿರಾಕರಿಸಿದ್ದರು. ಘಟನೆ ಅಸಹ್ಯಕರ ಮತ್ತು ವಿಕೃತಿಯಿಂದ ಕೂಡಿದೆ. ನಾಗರಿಕ ಪ್ರಜ್ಞೆಯನ್ನು ಆಘಾತಗೊಳಿಸಿದೆ ಎಂದು ನ್ಯಾಯಾಧೀಶರು ಅರ್ಜಿ ವಿಚಾರಣೆ ವೇಳೆ ಹೇಳಿದ್ದರು.


2022ರ ನವೆಂಬರ್ 26 ರಂದು ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಿಶ್ರಾ ಅವರು ಕುಡಿದ ಅಮಲಿನಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದರು.

Join Whatsapp
Exit mobile version