Home ಟಾಪ್ ಸುದ್ದಿಗಳು ಶಕೀಲ್ ಅವರು ಸಾಮಾಜಿಕ ಬದಲಾವಣೆ ಬಯಸಿದ್ದರು: ಇಲ್ಯಾಸ್ ತುಂಬೆ

ಶಕೀಲ್ ಅವರು ಸಾಮಾಜಿಕ ಬದಲಾವಣೆ ಬಯಸಿದ್ದರು: ಇಲ್ಯಾಸ್ ತುಂಬೆ

ಉಳ್ಳಾಲ: ಎಸ್ಡಿಪಿಐ ತಲಪಾಡಿ ಗ್ರಾಮಸಮಿತಿ ಕಾರ್ಯದರ್ಶಿ ಮರ್ಹೂಮ್ ಶಕೀಲ್ ಕೇಸಿರೋಡ್ ಅವರು ಸಾಮಾಜಿಕ ಬದಲಾವಣೆಯನ್ನು ಬಯಸಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ಎಸ್ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ ತಿಳಿಸಿದ್ದಾರೆ.

ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ತಲಪಾಡಿ ಗ್ರಾಮ ಸಮಿತಿ ವತಿಯಿಂದ ಆಯೋಜಿಸಿದ ಮರ್ಹೂಮ್ ಶಕೀಲ್ ಅವರ ಅನುಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಇಲ್ಯಾಸ್ ತುಂಬೆ ಅವರು ಶಕೀಲ್ ಕೇಸಿರೋಡ್ ತಲಪಾಡಿ ವ್ಯಾಪ್ತಿಯಲ್ಲಿ ಪಕ್ಷವನ್ನು ಬಲಪಡಿಸುವುದರ ಜೊತೆಗೆ ಸಾಮಾಜಿಕ ಬದಲಾವಣೆಯ ಕನಸ್ಸನ್ನು ಕಂಡಿದ್ದು, ಅವರ ಈ ಮಹದಾಸೆಯನ್ನು ನಾವೆಲ್ಲರೂ ಸೇರಿ ಸಾಕಾರಗೊಳಿಸಬೇಕೆಂದು ಮನವಿ ಮಾಡಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಎಸ್ಡಿಪಿಐ ದ.ಕ ಜಿಲ್ಲಾಧ್ಯಕ್ಷ ಅನ್ವರ್ ಸಾದಾತ್ ಬಜತ್ತೂರು ಅವರು ಶಕೀಲ್ ಅವರು ಸಾಮಾಜಿಕ ಕಳಕಳಿಯನ್ನು ಮೈಗೂಡಿಸಿಗೊಂಡ ವ್ಯಕ್ತಿತ್ವ ಎಂದು ಮಾರ್ಮಿಕವಾಗಿ ನುಡಿದರು.

ಪ್ರಸಕ್ತ ಸಭೆಯನ್ನು ತಲಪಾಡಿ ಗ್ರಾಮ ಸಮಿತಿ ಅಧ್ಯಕ್ಷ ಹಕೀಮ್ ಕೇಸಿರೋಡ್ ವಹಿಸಿದ್ದರು. ವೇದಿಕೆಯಲ್ಲಿ ಎಸ್ಡಿಪಿಐ ಉಳ್ಳಾಲ ಕ್ಷೇತ್ರ ಸಮಿತಿ ಅಧ್ಯಕ್ಷ ಬಶೀರ್ ಎಸ್.ಎಮ್, ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯ ಜಲೀಲ್ ಕೆ, ಎಸ್ಡಿಪಿಐ ಮಂಜೇಶ್ವರ ಕ್ಷೇತ್ರ ಸಮಿತಿ ಅಧ್ಯಕ್ಷ ಅಶ್ರಫ್ ಬಡಾಜೆ, ಎಸ್ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಡ್ಡೂರು, ಕಾರ್ಯದರ್ಶಿ ಸುಹೈಲ್ ಪಳ್ನಿರ್, ಕ್ಷೇತ್ರ ಸಮಿತಿ ಕಾರ್ಯದರ್ಶಿ ಉಬೈದ್ ಅಮ್ಮೆಂಬಳ, ಕ್ಷೇತ್ರ ಸಮಿತಿ ಸದಸ್ಯ ಆಸೀಫ್ ಕೇಸಿರೋಡ್, ತಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಇಸ್ಮಾಯಿಲ್. ಟಿ, ಮರ್ಹೂಮ್ ಶಕೀಲ್ ಕೇಸಿರೋಡ್ ಸಹೋದರ ಶಮೀರ್ ಕೇಸಿರೋಡ್, ಭಾವ ಹಾಶಿಮ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಎಸ್ಡಿಪಿಐ ಮಂಜನಾಡಿ ಬ್ಲಾಕ್ ಅಧ್ಯಕ್ಷ ನೌಷಾದ್ ಕಿನ್ಯ ನೆರೆದವರನ್ನು ಸ್ವಾಗತಿಸಿ, ಕೋಟೆಕಾರ್ ಪಟ್ಟಣ ಪಂಚಾಯತ್ ಅಧ್ಯಕ್ಷ ಮೊಯಿದಿನ್ ಅಜ್ಜಿನಡ್ಕ ಕಾರ್ಯಕ್ರಮ ನಿರೂಪಣೆಗೈದರು.

Join Whatsapp
Exit mobile version