Home ಟಾಪ್ ಸುದ್ದಿಗಳು ತವರಿಗೆ ‘ಚಿನ್ನಮ್ಮ’ | ಶಶಿಕಲಾ ನಟರಾಜನ್ ಗೆ ತಮಿಳುನಾಡಿಗರ ಅದ್ದೂರಿ ಸ್ವಾಗತ; ಅಭಿಮಾನಿಗಳ ಕಂಡು ಭಾವುಕ

ತವರಿಗೆ ‘ಚಿನ್ನಮ್ಮ’ | ಶಶಿಕಲಾ ನಟರಾಜನ್ ಗೆ ತಮಿಳುನಾಡಿಗರ ಅದ್ದೂರಿ ಸ್ವಾಗತ; ಅಭಿಮಾನಿಗಳ ಕಂಡು ಭಾವುಕ

ಬೆಂಗಳೂರು : ಕಳೆದ ನಾಲ್ಕು ವರ್ಷಗಳಿಂದ ಸೆರೆವಾಸ ಅನುಭವಿಸಿ ಇಂದು ಚೆನ್ನೈಗೆ ಆಗಮಿಸುತ್ತಿರುವ ತಮಿಳುನಾಡಿನ ಮಾಜಿ ಸಿಎಂ ದಿವಂಗತ ಜಯಲಲಿತಾ ಅವರ ಆಪ್ತೆ ಶಶಿಕಲಾ ನಟರಾಜನ್ ಗೆ ಇಂದು ಅಭಿಮಾನಿಗಳಿಂದ ಭಾರೀ ಅದ್ದೂರಿ ಸ್ವಾಗತ ಸಿಕ್ಕಿದೆ. ಮಾರ್ಗಮಧ್ಯೆ ‘ಚಿನ್ನಮ್ಮ’ ಆಗಮನಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳನ್ನು ಕಂಡು ಶಶಿಕಲಾ ಭಾವುಕರಾದರು.

ಆಸ್ಪತ್ರೆಯಿಂದ ಬಿಡುಗಡೆಗೊಂಡು ರೆಸಾರ್ಟ್ ವೊಂದರಲ್ಲಿ ತಂಗಿದ್ದ ಶಶಿಕಲಾ ಇಂದು ಬೆಳಗ್ಗೆ ಅಲ್ಲಿಂದ ಹೊರಟಿದ್ದಾರೆ. 8ಕ್ಕೂ ಹೆಚ್ಚು ಬೆಂಗಾವಲು ವಾಹನಗಳೊಂದಿಗೆ ಶಶಿಕಲಾ ತವರಿನತ್ತ ತೆರಳಿದ್ದಾರೆ. 50ಕ್ಕೂ ಹೆಚ್ಚು ಅಭಿಮಾನಿಗಳ ವಾಹನಗಳು ಅವನ್ನು ಹಿಂಬಾಲಿಸಿವೆ.

ಶಶಿಕಲಾ ಆಗಮನದ ಹಿನ್ನೆಲೆಯಲ್ಲಿ ಜಯಲಲಿತಾ ಮತ್ತು ಚಿನ್ನಮ್ಮರ ಫೋಟೊ ಹಿಡಿದು ಅಭಿಮಾನಿಗಳು ಭರ್ಜರಿ ಡ್ಯಾನ್ಸ್ ಮಾಡಿದರು. ಶಶಿಕಲಾ ಹಿನ್ನೆಲೆಯಲ್ಲಿ ತಮಿಳುನಾಡು-ಕರ್ನಾಟಕ ಗಡಿ ಹೊಸೂರು ಬಳಿ ಭಾರೀ ಭದ್ರತೆ ನಿಯೋಜಿಸಲಾಗಿದೆ.

Join Whatsapp
Exit mobile version