ಕಂಬಳೆ : ಆರ್ ಎಸ್ ಎಸ್ ಕಾರ್ಯಕರ್ತರಿಂದ ಹತ್ಯೆಯಾದ ಎಸ್.ಡಿ.ಪಿ.ಐ ಕೇರಳ ರಾಜ್ಯ ಸಮಿತಿ ಕಾರ್ಯದರ್ಶಿಯಾಗಿದ್ದ ಕೆ,ಎಸ್ ಶಾನ್ ಅನುಸ್ಮರಣೆ ಹಾಗೂ ಕುಂಬಳೆ ವಲಯ ಕಾರ್ಯಕರ್ತರ ಸಮಾವೇಶವು ಆರಿಕ್ಕಾಡಿ ಅಮಾನ ಟ್ರೇಡ್ ಸೆಂಟರ್ ನಲ್ಲಿ ಎಸ್.ಡಿ.ಪಿ.ಐ ಮಂಜೇಶ್ವರ ಕ್ಷೇತ್ರ ಸಮಿತಿ ನೇತೃತ್ವದಲ್ಲಿ ನಡೆಯಿತು.
ಪಕ್ಷದ ಕೋಝಿಕ್ಕೋಡ್ ಜಿಲ್ಲಾ ಕಾರ್ಯದರ್ಶಿ ಎನ್. ಕೆ ರಶೀದ್ ಉಮರಿ ಉದ್ಘಾಟಿಸಿದ ಕಾರ್ಯಕ್ರಮದಲ್ಲಿ ಮಂಜೇಶ್ವರ ಕ್ಷೇತ್ರ ಸಮಿತಿ ಅಧ್ಯಕ್ಷ ಅಶ್ರಫ್ ಬಡಾಜೆ ಅಧ್ಯಕ್ಷತೆ ವಹಿಸಿದರು.
ಎಸ್.ಡಿ.ಪಿ.ಐ ಜಿಲ್ಲಾ ಕಾರ್ಯದರ್ಶಿ ಸವಾದ್ ಸಿ,ಎ ಮಂಜೇಶ್ವರ ಬ್ಲಾಕ್ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಹಮೀದ್ ಹೊಸಂಗಡಿ, ಕುಂಬಳೆ ಗ್ರಾಮ ಪಂಚಾಯತ್ ಸದಸ್ಯ ಅನ್ವರ್ ಆರಿಕ್ಕಾಡಿ, ಎಸ್,ಡಿ,ಪಿ,ಐ ಕ್ಷೇತ್ರ ಕೋಶಾಧಿಕಾರಿ ತಾಜು ಉಪ್ಪಳ, ಸೆಕ್ರಟರಿ ಟಿ,ಎ ಜಲೀಲ್ ಹಾಗೂ ಎಸ್,ಡಿ,ಪಿ,ಐ ಮಂಗಲ್ಪಾಡಿ ಪಂಚಾಯತ್ ಅಧ್ಯಕ್ಷ ಇಂತಿಯಾಝ್ ಉಪ್ಪಳ ಮುಂತಾದವರು ಮಾತನಾಡಿದರು. ಎಸ್.ಡಿ.ಪಿ.ಐ ಮಂಜೇಶ್ವರ ಕ್ಷೇತ್ರ ಸಮಿತಿ ಕಾರ್ಯದರ್ಶಿ ಶರೀಫ್ ಪಾವೂರು ಸ್ವಾಗತಿಸಿ ಪಕ್ಷದ ಕುಂಬಳೆ ಪಂಚಾಯತ್ ಅಧ್ಯಕ್ಷ ನಾಸರ್ ಬಂಬ್ರಾಣ ವಂದಿಸಿದರು.