Home ಟಾಪ್ ಸುದ್ದಿಗಳು ಬರೋಬ್ಬರಿ 9 ಕೋಟಿಗೆ ಕಿಂಗ್ಸ್ ಪಂಜಾಬ್ ಪಾಲಾದ ಶಾರೂಕ್ ಖಾನ್ !

ಬರೋಬ್ಬರಿ 9 ಕೋಟಿಗೆ ಕಿಂಗ್ಸ್ ಪಂಜಾಬ್ ಪಾಲಾದ ಶಾರೂಕ್ ಖಾನ್ !

ದೆಹಲಿ: ಇಲ್ಲಿ ನಡೆಯುತ್ತಿರುವ ಐಪಿಎಲ್ -2022 ಹರಾಜು ಪ್ರಕ್ರಿಯೆಯಲ್ಲಿ ಕ್ರಿಕೆಟಿಗ ಶಾರೂಕ್ ಖಾನ್ ರನ್ನು ಕಿಂಗ್ ಪಂಜಾಬ್ ಬರೋಬ್ಬರಿ 9 ಕೋಟಿಗೆ ಖರೀದಿಸಿದೆ. ಇದುವರೆಗೆ ಏಕದಿನ ಅಥವಾ ಟೆಸ್ಟ್ ಕ್ಯಾಪ್ ಧರಿಸದ ಶಾರೂಕ್ ಖಾನ್ ಗೆ ಅದೃಷ್ಟ ಒಲಿದು ಬಂದಿದೆ. ಕಳೆದ ಐಪಿಎಲ್ ನಲ್ಲಿ ಶಾರೂಕ್ ಖಾನ್ ಕಿಂಗ್ ಪಂಜಾಬ್ ಪರವೇ ಆಡಿದ್ದರು. ಆದರೆ ಈ ಬಾರಿ ಅವರನ್ನು ಮತ್ತೊಮ್ಮೆ ಹರಾಜು ಮೂಲಕವೇ ಖರೀದಿಸಬೇಕಿತ್ತು.

40 ಲಕ್ಷ ಮುಖ ಬೆಲೆಯಿಂದ ಪ್ರಾರಂಭಗೊಂಡ ಹರಾಜು ಪ್ರಕ್ರಿಯೆಯಲ್ಲಿ ಮೊದಲಿಗೆ ಚೆನ್ನೈ ತಂಡದ ಜೊತೆಗೆ ಕೆಕೆಆರ್ ಕೂಡಾ ಸ್ಪರ್ಧೆ ಒಡ್ಡಿತ್ತು. ಆದರೆ ಹರಾಜು ಬೆಲೆ 3.5 ಕೋಟಿ ದಾಟಿದ ಮೇಲೆ ಕೆಕೆಆರ್ ಮುಂದುವರೆದಿರಲಿಲ್ಲ. ಆ ಬಳಿಕ ಚೆನ್ನೈ ಮತ್ತು ಕಿಂಗ್ಸ್ ಪಂಜಾಬ್ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿತು. ಕೊನೆಗೆ ಪಟ್ಟು ಬಿಡದ ಕಿಂಗ್ಸ್ ಪಂಜಾಬ್ 9 ಕೋಟಿಗೆ ಶಾರೂಕ್ ಖಾನ್ ರನ್ನು ತನ್ನ ತಂಡಕ್ಕೆ ಸೇರಿಸಿತು.

Join Whatsapp
Exit mobile version