Home ಟಾಪ್ ಸುದ್ದಿಗಳು ರಮಝಾನ್ ರಜೆ: ಸರ್ಕಾರದ ಆದೇಶದಲ್ಲಿ ಚಂದ್ರದರ್ಶನ ಸಮಿತಿಯ ಉಲ್ಲೇಖ ಮಾಡಿರುವುದು ಅಚ್ಚರಿ ಮೂಡಿಸಿದೆ: ಶಾಫಿ ಸಅದಿ

ರಮಝಾನ್ ರಜೆ: ಸರ್ಕಾರದ ಆದೇಶದಲ್ಲಿ ಚಂದ್ರದರ್ಶನ ಸಮಿತಿಯ ಉಲ್ಲೇಖ ಮಾಡಿರುವುದು ಅಚ್ಚರಿ ಮೂಡಿಸಿದೆ: ಶಾಫಿ ಸಅದಿ

► ► ಸರಕಾರದ ನಡೆಗೆ ವಕ್ಫ್ ಅಧ್ಯಕ್ಷರ ಬೇಸರ

ಬೆಂಗಳೂರು: ರಮಝಾನ್ ಹಬ್ಬ ಆಚರಣೆಗೆ ಸಂಬಂಧಿಸಿದಂತೆ ಚಂದ್ರ ದರ್ಶನ ಸಮಿತಿಯ ಸಭೆಯು ಮೇ 1ರಂದು ಸಂಜೆ 7 ಗಂಟೆಗೆ ಅಮೀರೆ ಶರೀಅತ್ ಮೌಲಾನ ಸಗೀರ್ ಅಹ್ಮದ್ ಖಾನ್ ರಶಾದಿ ನೇತೃತ್ವದಲ್ಲಿ ನಗರದ ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿರುವ ರಾಜ್ಯ ವಕ್ಫ್ ಬೋರ್ಡ್ ಕೇಂದ್ರ ಕಚೇರಿಯಲ್ಲಿ ನಡೆಯಲಿದೆ.


ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಅಧೀನ ಕಾರ್ಯದರ್ಶಿ ಶನಿವಾರ ಅಧಿಸೂಚನೆಯನ್ನು ಹೊರಡಿಸಿ, ರಂಜಾನ್ ಹಬ್ಬದ ಅಂಗವಾಗಿ ಮೇ 3ರಂದು ಮಂಜೂರು ಮಾಡಲಾಗಿದ್ದ ರಜೆಯನ್ನು, ಚಂದ್ರ ದರ್ಶನ ಸಮಿತಿಯ ತೀರ್ಮಾನದಂತೆ ಮೇ 2ರಂದು ಮಂಜೂರು ಮಾಡಿ ಆದೇಶಿಸಿರುವುದಾಗಿ ತಿಳಿಸಿದ್ದಾರೆ.


ಈ ಸಂಬಂಧ ಪ್ರತಿಕ್ರಿಯಿಸಿರುವ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಎನ್.ಕೆ.ಮುಹಮ್ಮದ್ ಶಾಫಿ ಸಅದಿ, ರಂಜಾನ್ ಮಾಸದ 29ನೆ ಉಪವಾಸ ಮುಗಿದ ಬಳಿಕ ಚಂದ್ರ ದರ್ಶನ ಸಮಿತಿ ಸಭೆ ನಡೆಸುವುದು ಸಂಪ್ರದಾಯ. ಅದರಂತೆ, ನಾಳೆ ಸಂಜೆ ಸಭೆ ನಡೆಯಲಿದೆ. ಸರಕಾರದ ಅಧಿಸೂಚನೆಯಲ್ಲಿ ಚಂದ್ರ ದರ್ಶನ ಸಮಿತಿಯ ತೀರ್ಮಾನ ಎಂದು ನಮೂದಿಸಿರುವುದು ಅಚ್ಚರಿ ಉಂಟು ಮಾಡಿದೆ ಎಂದರು.

Join Whatsapp
Exit mobile version