ಮಹಿಳೆಗೆ ಲೈಂಗಿಕ ದೌರ್ಜನ್ಯ| ಕಾಮುಕನ ಸೆರೆ

Prasthutha|

ಬೆಂಗಳೂರು: ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ದೌರ್ಜನ್ಯ ನಡೆಸಿದ ಕಾಮುಕನನ್ನು ಸುಬ್ರಹ್ಮಣ್ಯನಗರ ಪೊಲೀಸರು ಬಂಧಿಸಿದ್ದಾರೆ.

- Advertisement -

ಸಂತ್ರಸ್ತ ಮಹಿಳೆಯು ನೀಡಿದ ದೂರಿನ ಆಧಾರದಲ್ಲಿ ಆರೋಪಿ ಸತೀಶ್ ನನ್ನು ಬಂಧಿಸಲಾಗಿದೆ.

ಒರಾಯನ್ ಮಾಲ್ ಬಳಿ ಮಹಿಳೆಯನ್ನು ಕರೆದಿದ್ದ ಆರೋಪಿ ಸತೀಶ್, ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿ ತನ್ನ ಮೈ ಕೈ ಮುಟ್ಟಿ ಲೈಂಗಿಕ ದೌರ್ಜನ್ಯ ನಡೆಸಿದ್ದ ಎಂದು ಆರೋಪಿಸಲಾಗಿದೆ.

- Advertisement -

ತನ್ನ ಕೆಲವು ಫೋಟೋ, ವಿಡಿಯೋಗಳು ಆರೋಪಿ ಮೊಬೈಲ್ನಲ್ಲಿದೆ. ಅದನ್ನು ಡಿಲೀಟ್ ಮಾಡಿಸುವಂತೆ ಹಾಗೂ ತನ್ನ ಬಳಿ ಆರೋಪಿ ಚಿನ್ನ, ಹಣ ಪಡೆದಿದ್ದು, ಅದನ್ನು ವಾಪಸ್ ಕೊಡಿಸುವಂತೆ ಸುಬ್ರಹ್ಮಣ್ಯ ನಗರ ಠಾಣೆಗೆ ಮಹಿಳೆ ದೂರು ನೀಡಿದ್ದಾರೆ.

ಮಹಿಳೆ ದೂರಿನ ಮೇರೆಗೆ ಆರೋಪಿ ಸತೀಶ್ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.

Join Whatsapp
Exit mobile version