Home ಟಾಪ್ ಸುದ್ದಿಗಳು ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ: ವೃದ್ಧನಿಗೆ 83 ವರ್ಷ ಜೈಲು ವಿಧಿಸಿದ ಕೇರಳ ಕೋರ್ಟ್

ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ: ವೃದ್ಧನಿಗೆ 83 ವರ್ಷ ಜೈಲು ವಿಧಿಸಿದ ಕೇರಳ ಕೋರ್ಟ್

ಪಾಲಕ್ಕಾಡ್: ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ವೃದ್ಧರೊಬ್ಬರಿಗೆ ಕೇರಳ ನ್ಯಾಯಾಲಯ ಒಟ್ಟು 83 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಆದರೆ, ಗರಿಷ್ಠ 40 ವರ್ಷಗಳವರೆಗೆ ಮಾತ್ರ ಅಪರಾಧಿ ಜೈಲಿನಲ್ಲಿ ಇರಬಹುದಾಗಿರುವುದರಿಂದ ಈ ಪ್ರಕರಣದ ಅಪರಾಧಿಗೂ ಅದು ಅನ್ವಯವಾಗಲಿದೆ ಎಂದೂ ಕೋರ್ಟ್ ಹೇಳಿದೆ.

ಪಟ್ಟಾಂಬಿ ತ್ವರಿತ ಗತಿ ವಿಶೇಷ ನ್ಯಾಯಾಲಯ (ಎಫ್‌ಐಎಸ್‌ಸಿ)ದ ನ್ಯಾಯಾಧೀಶ ರಾಮು ರಮೇಶ್‌ ಚಂದ್ರ ಭಾನು ಪ್ರಕರಣದ ವಿಚಾರಣೆ ನಡೆಸಿದ್ದು, ಅಪರಾಧಿಗೆ ಜೈಲು ಶಿಕ್ಷೆಯೊಂದಿಗೆ ₹4.3 ಲಕ್ಷ ದಂಡ ವಿಧಿಸಿದ್ದು, ಆ ಹಣವನ್ನು ಸಂತ್ರಸ್ತೆಗೆ ನೀಡುವಂತೆ ತೀರ್ಪು ನೀಡಿದ್ದಾರೆ.

ಅಪರಾಧಿ 65 ವರ್ಷದ ವೃದ್ಧ ತನ್ನ ಸಂಬಂಧಿ 16 ವರ್ಷದ ಬಾಲಕಿಗೆ ಆಕೆಯ ಮನೆಯಲ್ಲೇ ಪದೇ ಪದೇ ಲೈಂಗಿಕ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಯಾರಿಗೂ ತಿಳಿಸದಂತೆ ಬೆದರಿಕೆ ಒಡ್ಡಿದ್ದ ಎಂದು ಪ್ರಾಸಿಕ್ಯೂಷನ್‌ ತಿಳಿಸಿದೆ.

‘ಸಂತೃಸ್ತ ಬಾಲಕಿ ತನ್ನ ಮೇಲೆ ದೌರ್ಜನ್ಯವಾಗುತ್ತಿರುವುದರ ಬಗ್ಗೆ ಶಿಕ್ಷಕಿಯೊಬ್ಬರಿಗೆ ತಿಳಿಸಿದ್ದಳು. ಬಳಿಕ ಪ್ರಕರಣವು ಮಕ್ಕಳ ಸೇವಾ ಇಲಾಖೆಯ ಗಮನಕ್ಕೆ ಬಂದಿದ್ದು, ಅವರ ಮಾಹಿತಿಯ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

Join Whatsapp
Exit mobile version