Home ಟಾಪ್ ಸುದ್ದಿಗಳು ನ್ಯಾಯಾಧೀಶರಿಂದಲೇ ಬಾಲಕನಿಗೆ ಲೈಂಗಿಕ ಕಿರುಕುಳ: ಹುದ್ದೆಯಿಂದ ಅಮಾನತು ಮಾಡಿದ ಮುಖ್ಯನ್ಯಾಯಮೂರ್ತಿ

ನ್ಯಾಯಾಧೀಶರಿಂದಲೇ ಬಾಲಕನಿಗೆ ಲೈಂಗಿಕ ಕಿರುಕುಳ: ಹುದ್ದೆಯಿಂದ ಅಮಾನತು ಮಾಡಿದ ಮುಖ್ಯನ್ಯಾಯಮೂರ್ತಿ

ಬೆಂಗಳೂರು: ಹದಿನಾಲ್ಕು ವರ್ಷ ಪ್ರಾಯದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ರಾಜಸ್ಥಾನ ಜಿಲ್ಲಾ ನ್ಯಾಯಾಧೀಶ ಜಿತೇಂದ್ರ ಸಿಂಗ್ ವಿರುದ್ಧ ಪೋಕ್ಸೊ ಕಾಯಿದೆ ಅಡಿ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಿ ರಾಜಸ್ಥಾನ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಖಿಲ್ ಖುರೇಷಿ ಆದೇಶಿಸಿದ್ದಾರೆ.


ಭಾರತ್ ಪುರ ಜಿಲ್ಲೆಯಲ್ಲಿ 14 ವರ್ಷ ಪ್ರಾಯದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ರಾಜಸ್ತಾನ ಪೊಲೀಸರು ನ್ಯಾಯಾಧೀಶ ಜಿತೇಂದ್ರ ಸಿಂಗ್ ಮತ್ತು ಇತರ ಇಬ್ಬರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಜಿತೇಂದ್ರ ಗೊಲಿಯಾ ಅವರು ಭ್ರಷ್ಟಾಚಾರ ತಡೆ ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾಗಿದ್ದರು.


ಬಾಲಕ ಟೆನ್ನಿಸ್ ಆಡಲು ಕ್ರೀಡಾಂಗಣಕ್ಕೆ ಹೋಗಿದ್ದಾಗ ನ್ಯಾಯಾಧೀಶರು ಕೂಡ ಅಲ್ಲಿಗೆ ಬರುತ್ತಿದ್ದರು. ಆಗ ನ್ಯಾಯಾಧೀಶರು ಆತನಿಗೆ ಆಮಿಷವೊಡ್ಡಿ ಮನೆಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Join Whatsapp
Exit mobile version