Home ಟಾಪ್ ಸುದ್ದಿಗಳು ಸೆಕ್ಸ್ ಒಂದು ಸುಂದರ ಸಂಗತಿ: ಪೋಪ್ ಫ್ರಾನ್ಸಿಸ್

ಸೆಕ್ಸ್ ಒಂದು ಸುಂದರ ಸಂಗತಿ: ಪೋಪ್ ಫ್ರಾನ್ಸಿಸ್

ವ್ಯಾಟಿಕನ್ ಸಿಟಿ: ಬುಧವಾರ ಬಿಡುಗಡೆಯಾದ ‘ಲೈಂಗಿಕತೆಯ ಸದ್ಗುಣಗಳು’ ಸಾಕ್ಷ್ಯ ಚಿತ್ರದಲ್ಲಿ ಪೋಪ್ ಫ್ರಾನ್ಸಿಸ್ ಅವರು “ಲೈಂಗಿಕತೆಯು ದೇವರು ಮಾನವರಿಗೆ ನೀಡಿರುವ ಸುಂದರ ಸಂಗತಿಗಳಲ್ಲಿ ಒಂದು” ಎಂದು ಹೇಳಿದ್ದಾರೆ.


86ರ ಹರೆಯದ ಪೋಪ್ ಫ್ರಾನ್ಸಿಸ್ ಅವರು ಡಿಸ್ನಿ ನಿರ್ಮಾಣದ “ದಿ ಪೋಪ್ ಆನ್ಸರ್ಸ್” ನಲ್ಲಿ ಈ ರೀತಿ ಬಣ್ಣಿಸಿದ್ದಾರೆ. ಸಾಕ್ಷ್ಯಚಿತ್ರವನ್ನು ಕಳೆದ ವರ್ಷ ರೋಮ್‌’ನಲ್ಲಿ ನಡೆದ ಸಂವಾದ ಕಾರ್ಯಕ್ರಮವೊಂದರಲ್ಲಿ ಚಿತ್ರೀಕರಿಸಲಾಗಿದ್ದು, ಅದರಲ್ಲಿ 20 ವರ್ಷ ವಯಸ್ಸಿನ 10 ಜನರೊಂದಿಗೆ ಸಂವಾದ ನಡೆಸಲಾಗಿತ್ತು.
ಪೋಪ್ ಅವರು ಆ ಯುವಕರನ್ನು ನಾನಾ ವಿಷಯಗಳಲ್ಲಿ ಪ್ರಶ್ನಿಸುತ್ತಾರೆ. ಎಲ್ ಜಿಬಿಟಿ ಹಕ್ಕುಗಳು, ಬಸಿರಳಿಸು (ಅಬಾರ್ಶನ್), ಅಶ್ಲೀಲ ಕೈಗಾರಿಕೆ, ಲೈಂಗಿಕತೆ, ಕ್ಯಾಥೋಲಿಕ್ ಚರ್ಚ್ ಒಳಗೆ ನಂಬಿಕೆ ಮತ್ತು ಲೈಂಗಿಕ ಕಿರುಕುಳ ಇತ್ಯಾದಿ ವಿಷಯದ ಪ್ರಶ್ನೆಗಳು ಅದರಲ್ಲಿದ್ದವು.


ಅದರಲ್ಲಿ ಲೈಂಗಿಕತೆಯು ದೇವರು ಮಾನವರಿಗೆ ನೀಡಿರುವ ಒಂದು ಸುಂದರ ಸಂಗತಿ ಎಂದು ಪೋಪ್ ಹೇಳಿರುವರು.
ಹಸ್ತಮೈಥುನ ಬಗ್ಗೆ ಅವರು “ಲೈಂಗಿಕ ಸಿರಿಯನ್ನು ನೀವೇ ಪ್ರತಿಫಲಿಸುತ್ತೀರಿ. ನಿಜವಾದ ಲೈಂಗಿಕ ಬಯಕೆಯನ್ನು ಈ ಪರಿಯಲ್ಲಿ ಕಳೆಯುತ್ತೀರಿ” ಎಂದು ಹೇಳಿದರು.
ನೀವು ಎರಡು ಕಡೆ ಸಂಬಂಧಗಳಿಂದ ಮುಕ್ತರಾದವರನ್ನು ನೋಡಿರುವಿರಾ ಎಂದು ಪೋಪ್ ರನ್ನು ಕೇಳಲಾಯಿತು. ಅದಕ್ಕೆ ಅವರು ಎಲ್ ಜಿಬಿಟಿ ಹಕ್ಕುಗಳು ಎಂದೇ ಹೇಳಿದರು.
ಆಸ್ಪತ್ರೆಯಿಂದ ಪೋಪ್ ಬಿಡುಗಡೆ.


ಶ್ವಾಸಕೋಶ ಸಂಬಂಧಿ ತೊಂದರೆ ಒಳಗಾಗಿ ಆಸ್ಪತ್ರೆ ಸೇರಿದ್ದ ಪೋಪ್ ಫ್ರಾನ್ಸಿಸ್ ಅವರು ಬುಧವಾರ ರೋಮ್ ನ ಆಸ್ಪತ್ರೆಯಿಂದ ವ್ಯಾಟಿಕನ್ ಸಿಟಿ ನಿವಾಸಕ್ಕೆ ತೆರಳಿದರು.
ಭಾರತದ ಪ್ರಧಾನಿ ಮೋದಿಯವರ ಸಹಿತ ನಾನಾ ಜಾಗತಿಕ ಮುಖಂಡರು ಪೋಪ್ ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದರು.
“ಎಲ್ಲರೂ ದೇವರ ಮಕ್ಕಳು, ದೇವರು ಯಾರನ್ನೂ ತೆಗೆದು ಹಾಕುವುದಿಲ್ಲ, ದೇವರೇ ತಂದೆ. ಹಾಗಾಗಿ ಯಾರನ್ನಾದರೂ ಯಾವುದೇ ಚರ್ಚ್ ನಿಂದ ತೆಗೆದು ಹಾಕುವ ಹಕ್ಕನ್ನು ನಾನು ಹೊಂದಿಲ್ಲ” ಎಂದು ಪೋಪ್ ಹೇಳಿದರು.

Join Whatsapp
Exit mobile version