Home ಕರಾವಳಿ ದ.ಕ. ಜಿಲ್ಲೆಯ ಹಲವು ಅಂಗನವಾಡಿಗಳಿಗೆ ಕೊಳೆತ ಮೊಟ್ಟೆ ಪೂರೈಕೆ

ದ.ಕ. ಜಿಲ್ಲೆಯ ಹಲವು ಅಂಗನವಾಡಿಗಳಿಗೆ ಕೊಳೆತ ಮೊಟ್ಟೆ ಪೂರೈಕೆ

ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯಲ್ಲಿಯೂ ಅಂಗನವಾಡಿಗಳಿಗೂ ಕೊಳೆತ ಮೊಟ್ಟೆ ಪೂರೈಕೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.


ಬಂಟ್ವಾಳದ ಅಂಗನವಾಡಿಗಳಲ್ಲಿ ಕೊಳೆತ ಮೊಟ್ಟೆ ಪೂರೈಕೆಯಾಗಿರುವುದು ಪತ್ತೆಯಾಗಿದೆ. ಇದರ ಜತೆಗೆ ಮಂಗಳೂರಿನ ಚಿಲಿಂಬಿ, ಬೊಂದೆಲ್, ಮರಕಡ, ಕಾವೂರು ಸೇರಿದಂತೆ ಹಲವು ಕಡೆಗಳಲ್ಲಿ ಅಂಗನವಾಡಿಗಳಿಗೆ ಪೂರೈಕೆಯಾಗಿರುವ ಮೊಟ್ಟೆಗಳು ಕೊಳೆತಿವೆ. ಅಂಗನವಾಡಿ ಮಕ್ಕಳು, ಗರ್ಭಿಣಿಯರು, ಬಾಣಂತಿಯರಿಗೆ ಹಾಳಾಗಿರುವ ಮೊಟ್ಟೆಗಳನ್ನು ವಿತರಿಸಲಾಗಿದೆ. ಮೊಟ್ಟೆಗಳನ್ನು ಮನೆಯಲ್ಲಿ ಬೇಯಿಸಿದಾಗ, ಒಳಗಡೆ ಕಪ್ಪಾಗಿವೆ ಎಂದು ಬಾಣಂತಿಯರು, ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಟೆಂಡರ್ ದಾರರ ಮೂಲಕ ಮೊಟ್ಟೆ ಪೂರೈಕೆ ಮಾಡುವುದರಿಂದ ಕೊಳೆತ ಮೊಟ್ಟೆ ಸರಬರಾಜು ಆಗುತ್ತಿದೆ. ಬಾಲವಿಕಾಸ ಸಮಿತಿಯ ಮೂಲಕವೇ ಮೊಟ್ಟೆ ನೀಡುವ ವ್ಯವಸ್ಥೆ ಮಾಡಿ ಎಂದು ಆಗ್ರಹಿಸಲಾಗಿದೆ.

Join Whatsapp
Exit mobile version