ಜೆರುಸಲೆಮ್: ಜೆರುಸಲೆಮ್ ನಲ್ಲಿ ಧ್ವಜ ಮೆರವಣಿಗೆ ಮಾಡಿರುವ ಇಸ್ರೇಲ್ ನಡೆ ಧರ್ಮಯುದ್ಧಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಜೆರುಸಲೆಮ್ ನ ಇಸ್ಲಾಮಿಕ್ – ಕ್ರಿಶ್ಚಿಯನ್ ಸಮಿತಿ ಹೇಳಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಇಸ್ರೇಲ್ ಆಕ್ರಮಣವು ಈ ದಾಳಿಗಳ ಮೂಲಕ ಕಾನೂನು ಮತ್ತು ಐತಿಹಾಸಿಕ ಯಥಾಸ್ಥಿತಿಯನ್ನು ಬದಲಾಯಿಸುವ ಗುರಿಯನ್ನು ಹೊಂದಿದೆ ಎಂದು ಇಸ್ಲಾಮಿಕ್ – ಕ್ರಿಶ್ಚಿಯನ್ ಸಮಿತಿ ಆರೋಪಿಸಿದೆ.
ಇಸ್ರೇಲ್ ಸಾರ್ವಭೌಮತ್ವವನ್ನು ಜೆರುಸಲೆಮ್ ನಗರದಲ್ಲಿ ಹೇರಲು ಯತ್ನಿಸುತ್ತಿರುವುದರಿಂದ ಬಹಿರಂಗ ಯುದ್ಧವನ್ನು ಎದುರಿಸುವ ಕುರಿತು ಸಮಿತಿ ಎಚ್ಚರಿಸಿದೆ.
ಕಳೆದ ಭಾನುವಾರ ಸಾವಿರಾರು ಇಸ್ರೇಲ್ ಬಲಪಂಥೀಯರು ಪೂರ್ವ ಜೆರುಸಲೆಮ್ ನಲ್ಲಿ ಧ್ವಜ ಮೆರವಣಿಗೆ ನಡೆಸಿದ್ದರು. ಈ ವೇಳೆ ಆಕ್ರಮಿತ ಪೂರ್ವ ಜೆರುಸಲೆಮ್ ನಲ್ಲಿ ಇಸ್ರೇಲ್ ಧ್ವಜವನ್ನು ಏರಿಸಲಾಗಿದ್ದು, ಫೆಲೆಸ್ತೀನಿಯರ ಅಂಗಡಿ, ಮನೆ ಮತ್ತು ಅಲ್ ಅಕ್ಸಾ ಮಸೀದಿಯ ಮೇಲೆ ದಾಳಿ ನಡೆಸಿದ್ದರು.