Home ಟಾಪ್ ಸುದ್ದಿಗಳು ಕುಂದಲಹಳ್ಳಿ ಅಂಡರ್ ಪಾಸ್ ಬಳಿ ಸರ್ವಿಸ್ ರಸ್ತೆ ನಾಲ್ಕು ತಿಂಗಳಲ್ಲಿ ಕುಸಿತ

ಕುಂದಲಹಳ್ಳಿ ಅಂಡರ್ ಪಾಸ್ ಬಳಿ ಸರ್ವಿಸ್ ರಸ್ತೆ ನಾಲ್ಕು ತಿಂಗಳಲ್ಲಿ ಕುಸಿತ

ಬೆಂಗಳೂರು: ರಾಜಧಾನಿಯಲ್ಲಿ  19.5 ಕೋಟಿ ರೂ. ವೆಚ್ಚದ ಅಂಡರ್ ಪಾಸ್ ನ ಭಾಗವಾಗಿ ನಿರ್ಮಿಸಲಾದ ಸರ್ವಿಸ್ ರಸ್ತೆ ಭಾನುವಾರ ಕುಸಿದುಬಿದ್ದಿದ್ದರಿಂದ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಲು ಕಾಂಗ್ರೆಸ್ ಗೆ ಹೊಸ ಆಧಾರ ಸಿಕ್ಕಿದಂತಾಗಿದೆ.

ಪೂರ್ವ ಉಪನಗರಗಳನ್ನು ಐಟಿ ಹಬ್ ನ ಇತರ ಭಾಗಗಳಿಗೆ ಸಂಪರ್ಕಿಸುವ ಕುಂದನಹಳ್ಳಿಯಲ್ಲಿ 19.5 ಕೋಟಿ ರೂ.ಗಳ ಯೋಜನೆಯ ಭಾಗವಾಗಿ ಈ ರಸ್ತೆಯನ್ನು ನಿರ್ಮಿಸಲಾಗಿತ್ತು. ಇದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಸಿಗ್ನಲ್ ಫ್ರೀ ಕಾರಿಡಾರ್ ಯೋಜನೆಯ ಒಂದು ಭಾಗವಾಗಿದೆ.

ರಸ್ತೆಯ ಕೆಳಗಿರುವ ಪೈಪ್ ಒಡೆದಿರುವುದು ಇದಕ್ಕೆ ಕಾರಣವಾಗಿದೆ ಎಂದು ಸಿಗ್ನಲ್ ಫ್ರೀ ಕಾರಿಡಾರ್ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಯಪಾಲಕ ಎಂಜಿನಿಯರ್ ಒಬ್ಬರು ತಿಳಿಸಿದ್ದಾರೆ.

ಸದ್ಯ ನೀರು ಸರಬರಾಜು ಸೌಲಭ್ಯಗಳನ್ನು ನಿರ್ವಹಿಸುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ ಎಸ್ ಬಿ) ಪೈಪ್ ಲೈನ್ ದುರಸ್ತಿ ಮಾಡಿದೆ ಎಂದು ವರದಿಯಾಗಿದೆ.

Join Whatsapp
Exit mobile version