Home ಟಾಪ್ ಸುದ್ದಿಗಳು ಸಿದ್ದರಾಮಯ್ಯ ಬಸವಣ್ಣನವರ ಮುಂದುವರಿದ ಭಾಗ, ಅಂಬೇಡ್ಕರ್​ ಅವರ ಮುಂದಿನ ಧ್ವನಿ: ಹಂಸಲೇಖ

ಸಿದ್ದರಾಮಯ್ಯ ಬಸವಣ್ಣನವರ ಮುಂದುವರಿದ ಭಾಗ, ಅಂಬೇಡ್ಕರ್​ ಅವರ ಮುಂದಿನ ಧ್ವನಿ: ಹಂಸಲೇಖ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನಮಗೆ ಬಸವಣ್ಣನವರ ಮುಂದುವರಿದ ಭಾಗವಾಗಿ, ಅಂಬೇಡ್ಕರ್​ ಅವರ ಮುಂದಿನ ಧ್ವನಿಯಾಗಿ ಕನ್ನಡ ನಾಡಿನ ಎಲ್ಲ ಗುರುತುಗಳನ್ನು ಗಟ್ಟಿಯಾಗಿಸುತ್ತಿದ್ದಾರೆ ಎಂದು ಸಂಗೀತ ನಿರ್ದೇಶಕ ಹಂಸಲೇಖ ಬಣ್ಣಿಸಿದ್ದಾರೆ.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ವಿಜಯ ಮ್ಯೂಸಿಕ್​ ಸ್ಕೂಲ್​ ಆಯೋಜಿಸಿದ್ದ 25ನೇ ವರ್ಷದ ಸಪ್ತಸ್ವರ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದಿನ ದಿಟ್ಟ ಸರ್ಕಾರ ಕನ್ನಡದ ಧ್ವಜಕ್ಕೆ ಸಿಂಧುತ್ವ ತಂದು ಕೊಟ್ಟಿದೆ. ಪ್ರಪಂಚಕ್ಕೆ ಪ್ರಜಾಪ್ರಭುತ್ವ ಎಂದರೆ ಏನೆಂಬುದರ ಬಗ್ಗೆ ಬೀಜ ಬಿತ್ತಿದ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ರಾಯಾಭಾರಿ ಎಂದು ಘೋಷಿಸಿದೆ. ಕನ್ನಡ ಅಕ್ಷರಗಳು ನಾಮ ಫಲಕಗಳಲ್ಲಿ ಇಲ್ಲದಿದ್ದರೆ ಪರವಾನಗಿ ರದ್ದಾಗುತ್ತದೆ ಎಂಬ ದಿಟ್ಟ ಆಜ್ಞೆಯನ್ನೂ ಹೊರಡಿಸಿದೆ. ಇಂತಹ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ವಿಶೇಷವಾಗಿ ಕಾಣುತ್ತಿದ್ದಾರೆ ಹಂಸಲೇಖ ಹೇಳಿದರು.

Join Whatsapp
Exit mobile version