Home ಟಾಪ್ ಸುದ್ದಿಗಳು ಪೆರಿಯಾರ್ ಜನ್ಮ ದಿನವನ್ನು ಸಾಮಾಜಿಕ ನ್ಯಾಯ ದಿನವಾಗಿ ಆಚರಣೆ: ಮುಖ್ಯಮಂತ್ರಿ ಸ್ಟಾಲಿನ್ ಘೋಷಣೆ

ಪೆರಿಯಾರ್ ಜನ್ಮ ದಿನವನ್ನು ಸಾಮಾಜಿಕ ನ್ಯಾಯ ದಿನವಾಗಿ ಆಚರಣೆ: ಮುಖ್ಯಮಂತ್ರಿ ಸ್ಟಾಲಿನ್ ಘೋಷಣೆ

ಚೆನ್ನೈ: ಖ್ಯಾತ ಸಮಾಜ ಸುಧಾರಕ, ದಾರ್ಶನಿಕ ಪೆರಿಯಾರ್ ಅವರ ಜನ್ಮ ದಿನವಾದ ಸೆಪ್ಟೆಂಬರ್ 17 ಅನ್ನು ಸಾಮಾಜಿಕ ನ್ಯಾಯ ದಿನವನ್ನಾಗಿ ಆಚರಣೆ ಮಾಡಲಾಗುವುದೆಂದು ತಮಿಳ್ನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ವಿಧಾನಸಭೆಯಲ್ಲಿ ಪ್ರಕಟಿಸಿದ್ದಾರೆ.

ಸೆಪ್ಟೆಂಬರ್ 17 ರಂದು 1879 ರಲ್ಲಿ ಎ.ವಿ. ರಾಮಸ್ವಾಮಿ ಎಂಬ ತಮಿಳುನಾಡಿನ ಇರೋಡ್ ಎಂಬಲ್ಲಿ ಜನಿಸಿದರು. ಸಮಾಜದೊಂದಿಗೆ ತನ್ನ ಒಡನಾಟ, ಸಾಮಾಜಿಕ ಮೌಢ್ಯತನದ ವಿರುದ್ಧ ಹೋರಾಟ ನಡೆಸಿದ ಹಿನ್ನೆಲೆಯಲ್ಲಿ ಅವರು ನಂತರ ಪೆರಿಯಾರ್ ಎಂದೇ ಖ್ಯಾತರಾಗಿದ್ದರು.

ಈ ಹಿನ್ನೆಲೆಯಲ್ಲಿ ಪೆರಿಯಾರ್ ಅವರ ಜನ್ಮ ದಿನವನ್ನು ಸಾಮಾಜಿಕ ನ್ಯಾಯ ದಿನವನ್ನಾಗಿ ಆಚರಣೆ ಮಾಡಲು ನಿರ್ಧರಿಸಲಾಗಿದೆಯೆಂದು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ವಿಧಾನಸಭೆಯಲ್ಲಿ ಘೋಷಿಸಿದರು.

Join Whatsapp
Exit mobile version