ಕೇರಳ ಕಾಂಗ್ರೆಸ್ ನ ಹಿರಿಯ ನಾಯಕ ಪಿ.ಟಿ. ಥಾಮಸ್ ನಿಧನ

Prasthutha|

ಕೊಚ್ಚಿನ್: ಕೇರಳ ಕಾಂಗ್ರೆಸ್ ನ ಹಿರಿಯ ನಾಯಕ P. T. ಥಾಮಸ್ (71) ಅವರು ಬುಧವಾರ ಬೆಳಿಗ್ಗೆ ವೆಲ್ಲೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

- Advertisement -

ಕೇರಳ ಕಾಂಗ್ರೆಸ್ ನಲ್ಲಿ ಜನಪ್ರಿಯ ನಾಯಕರಲ್ಲೊಬ್ಬರಾದ ಥಾಮಸ್, ಇತ್ತೀಚೆಗೆ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಈ ಹಿಂದೆ ಇಡುಕ್ಕಿ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದ ಥಾಮಸ್, ಎರ್ನಾಕುಲಂ ಜಿಲ್ಲೆಯ ತೃಕ್ಕಾಕರ ಕ್ಷೇತ್ರದ ಶಾಸಕರಾಗಿ ಎರಡನೇ ಅವಧಿಗೆ ಅಯ್ಕೆಯಾಗಿದ್ದಾರೆ. ಅವರು ತೊಡುಪುಝ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಪ್ರತಿನಿಧಿಸಿದ್ದರು.

- Advertisement -

ಸದ್ಯ ಅವರು ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು – ಮಿತ್ರರು ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ.

Join Whatsapp